ಮನೀಶ್ ಕೀರ್ತೇಶ್ವರರ ಕುಟುಂಬಕ್ಕೆ ಲಾಟರಿ ಮಜ್ದೂರ್ ಸಂಘದಿಂದ ಸಹಾಯಹಸ್ತ

ಮಂಜೇಶ್ವರ: ಇತ್ತೀಚೆಗೆ ರೈಲು ಅಪಘಾತದಲ್ಲಿ ಮೃತಪಟ್ಟ ಮಂಜೇಶ್ವರ ಕೀರ್ತೇಶ್ವರ ನಿವಾಸಿ ಮನೀಶ್ ಸ್ಮರಣಾರ್ಥ ಕೇರಳ ಲಾಟರಿ ಮಜ್ದೂರ್ ಸಂಘ ತಲಪಾಡಿ ಘಟಕದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ತಲಪಾಡಿಯಲ್ಲಿ ನಡೆಯಿತು. ಬಿ.ಎಂ.ಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಯಶವಂತಿ ಬೆಜ್ಜ, ಕೇರಳ ಲಾಟರಿ ಮಜ್ದೂರ್ ಸಂಘ ಜಿಲ್ಲಾ ಕಾರ್ಯ ದರ್ಶಿ ಬಾಬುಮೋನ್ ಚೆರ್ಕಳ ನುಡಿನಮನ ಸಲ್ಲಿಸಿದರು. ಪ್ರದೀಷ್ ತಲಪಾಡಿ ಅಧ್ಯಕ್ಷತೆ ವಹಿಸಿದ್ದರು. ಅಗಲಿದ ಮನೀಶ್‌ರ ಕುಟುಂಬಕ್ಕೆ ಕಾರ್ಮಿಕರು ಸಂಗ್ರಹಿಸಿದ ಮೊತ್ತ ವನ್ನು ಹಸ್ತಾಂತರಿಸಲಾಯಿತು. ಬಿ.ಎಂ.ಎಸ್ ಕೇರಳ ಲಾಟರಿ ತಲ ಪಾಡಿ ಎರಡನೇ ಯೋಜನೆಯಡಿ ಈ ಸೇವಾ ಕಾರ್ಯ ನೆರವೇರಿಸಲಾಯಿತು. ಭಾಸ್ಕರ ಮಂಜೇಶ್ವರ ಸ್ವಾಗತಿಸಿ, ಸುಕೇಶ್ ಬೆಜ್ಜ ವಂದಿಸಿದರು. ಸಂಘಟನೆಯ ಸದಸ್ಯರಾದ ನಾರಾಯಣ, ಭಾಸ್ಕರ ಶೆಟ್ಟಿಗಾರ್, ಭಾಸ್ಕರ ಶೆಟ್ಟಿ, ಶ್ರೀಧರ ಶೆಟ್ಟಿ, ವನಿತಾ, ಶಮಿತ, ಪ್ರಭಾಕರ ಶೆಟ್ಟಿ, ಸುಜಿತ್, ಸಂದೇಶ, ಅನಿಲ್, ಶೈಲೇಶ್, ರವೀಂದ್ರ ಶೈಲೇಶ್ ತಲಪಾಡಿ, ಆನಂದ, ಪ್ರಕಾಶ್ ಶೆಟ್ಟಿ, ಹರೀಶ್, ಜಯರಾಮ್ ಪುಷ್ಪಾರ್ಚನೆ ಮಾಡಿದರು.

RELATED NEWS

You cannot copy contents of this page