ಉಪ್ಪಳ: ಸ್ಕೂಟರ್ನಲ್ಲಿ ತಲುಪಿದ ಇಬ್ಬರು ಯುವಕರು ಯುವತಿಯ ಕುತ್ತಿಗೆಯಿಂದ ಎರಡೂಕಾಲು ಪವನ್ನ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ನಿನ್ನೆ ಅಪರಾಹ್ನ 3.10ರ ವೇಳೆ ಹೊಸಂಗಡಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಪೈವಳಿಕೆ ಬಾಯಿಕಟ್ಟೆಯ ಕೆ.ನಯನ (30) ಎಂಬವರ ಚಿನ್ನದ ಸರವನ್ನು ತಂಡ ಎಗರಿಸಿದೆ.
ಹೊಸಂಗಡಿ ಸ್ಟೇಟ್ ಬ್ಯಾಂಕ್ ಸಮೀಪದ ಸರ್ವೀಸ್ ರಸ್ತೆ ಮೂಲಕ ನಯನ ನಡೆದು ಹೋಗುತ್ತಿದ್ದಾಗ ಹೆಲ್ಮೆಟ್ ಹಾಗೂ ರೈನ್ಕೋಟ್ ಧರಿಸಿದ್ದ ಇಬ್ಬರು ಕಡಂಬಾರ್ಗೆ ತೆರಳುವ ರಸ್ತೆ ಯಾವುದೆಂದು ಕೇಳಿದ್ದಾರೆನ್ನಲಾಗಿದೆ. ನಯನ ದಾರಿ ಸೂಚಿಸುತ್ತಿದ್ದಂತೆ ಅವರ ಕುತ್ತಿಗೆಯಿಂದ ದುಷ್ಕರ್ಮಿಗಳು ಸರವನ್ನು ಕಸಿದು ತೆಗೆದು ಸ್ಕೂಟರ್ನಲ್ಲಿ ಅಪರಿಮಿತ ವೇಗದಲ್ಲಿ ಪರಾರಿಯಾಗಿದ್ದಾರೆಂದು ದೂರಲಾಗಿದೆ.ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಪೊಲೀಸರು ರಾಷ್ಟ್ರೀಯ ಹೆದ್ದಾರಿಯ ವಿವಿಧೆಡೆ ಸ್ಥಾಪಿಸಿರುವ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
ದ್ವಿಚಕ್ರ ವಾಹನಗಳಲ್ಲಿ ತಲುಪಿ ಪಾದಚಾರಿಗಳ ಕುತ್ತಿಗೆಯಿಂದ ಸರ ಕಸಿದು ಪರಾರಿಯಾಗುವ ತಂಡಗಳು ಕೆಲವು ತಿಂಗಳಹಿಂದೆ ಸಕ್ರಿಯವಾಗಿ ದ್ದವು. ಈ ಪೈಕಿ ಕೆಲವು ಆರೋಪಿಗ ಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಅಲ್ಪ ಬಿಡುವಿನ ಬಳಿಕ ಹೊಸಂಗಡಿ ಯಲ್ಲಿ ಯುವತಿಯ ಕುತ್ತಿಗೆಯಿಂದ ಸರ ಎಗರಿಸಲಾಗಿದೆ.





