ನಾಯಮ್ಮಾರಮೂಲೆ, ಶಿರಿಯದಲ್ಲಿ ವಾಹನ ಅಪಘಾತ: ಮೂವರು ಯುವಕರ ದಾರುಣ ಮೃತ್ಯು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ  ಎರಡು ಕಡೆಗಳಲ್ಲಿ ನಿನ್ನೆ ಸಂಭವಿಸಿದ ವಾಹನ ಅಪಘಾತಗ ಳಲ್ಲಾಗಿ ಮೂವರು ಯುವಕರು ಸಾವನ್ನಪ್ಪಿದ್ದಾರೆ.

ನಾಯಮ್ಮಾರಮೂಲೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ ಬೈಕ್‌ಗೆ ಮೀನು ಲಾರಿ ಢಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಅದೇ ರೀತಿ ಕುಂಬಳೆ ಬಳಿ ನಿನ್ನೆ ಬೈಕ್ ನಿಯಂ ತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ಗೆ ಢಿಕ್ಕಿ ಹೊಡೆದು ಅದರಲ್ಲಿ ಸಂಚರಿಸುತ್ತಿದ್ದ ಇಬ್ಬರು ಯುವಕರು ಪ್ರಾಣಕಳೆದುಕೊಂಡಿದ್ದಾರೆ.

ನಾಯಮ್ಮಾರಮೂಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ ವಾಹನ ಅಪಘಾತದಲ್ಲಿ ನಾಯಮ್ಮಾ ರಮೂಲೆ ಮಿನಿ ಎಸ್ಟೇಟ್ ರಹ್ಮಾನಿಯಾ ನಗರದ ತುಕಿಯಮೂಲೆಯ ಎಂ.ಮುಹಮ್ಮದ್ ರಫೀಕ್ (42) ಎಂಬವರು ಸಾವನ್ನಪ್ಪಿದ ದುರ್ದೈವಿ ನಿನ್ನೆ ಸಂಜೆ ಈ ದುರ್ಘಟನೆ ಸಂಭವಿಸಿದೆ.

ಸೀತಾಂಗೋಳಿ ಕಿನ್‌ಫ್ರಾ ಜೈವಿಕ ಗೊಬ್ಬರ ಕಾರ್ಖಾನೆಯ ಸಿಬ್ಬಂದಿಯಾಗಿ ರುವ ಮೊಹಮ್ಮದ್ ರಫೀಕ್ ನಿನ್ನೆ ಸಂಜೆ ಕೆಲಸ ಮುಗಿಸಿ ಬೈಕ್‌ನಲ್ಲಿ ನಾಯಮ್ಮಾರಮೂಲೆ ಸಮೀಪದ ಬಿ.ಸಿರೋಡ್‌ನ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿ ದ್ದಂತೆಯೇ ಕಾಸರಗೋಡಿನಿಂದ ಕಣ್ಣೂರಿನತ್ತ ಹೋಗುತ್ತಿದ್ದ ಮೀನು ಹೇರಿದ ಮಿನಿಲಾರಿ ಬೈಕ್‌ನ ಹಿಂಭಾಗಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದರಿಂದ ಗಂಭೀರ ಗಾಯಗೊಂಡ ರಫೀಕ್‌ರನ್ನು ಊರವರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಮೃತ ಮೊಹಮ್ಮದ್ ರಫೀಕ್ ರೆಹ್ಮಾನಿಯಾ ನಗರದಲ್ಲಿ ಕಳೆದ 11 ತಿಂಗಳ ಹಿಂದೆಯಷ್ಟೇ ಸ್ಥಳ ಖರೀದಿಸಿ ಮನೆ ನಿರ್ಮಿಸಿ ವಾಸ ಆರಂಭಿಸಿದ್ದರು. ಆಲಂಪಾಡಿಯ ದಿ| ಪಕ್ರು ಮುಹಮ್ಮದ್-ನಫೀಸಾ ದಂಪತಿ ಪುತ್ರನಾಗಿರುವ ಮೊಹಮ್ಮದ್ ರಫೀಕ್ ಪತ್ನಿ  ಬಾಸಿನ ತೈವಳಪ್ಪು, ಮಕ್ಕಳಾದ ಶಫಾನ್, ಫಾತಿಮ  ಮಿನಾಸ್, ಸಹೋದರ-ಸಹೋದರಿಯರಾದ ಮುಹಮ್ಮದ್ ಮುಸ್ತಫಾ, ಸುಹರಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವಿದ್ಯಾನಗರ ಪೊಲೀಸರು ಅಪಘಾತ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಇದೇ ರೀತಿ ಕುಂಬಳೆ ಶಿರಿಯಾ ಸೇತುವೆ ಬಳಿ ನಿನ್ನೆ ಸಂಜೆ ಸಂಭವಿಸಿದ ಇನ್ನೊಂದು ಅಪಘಾತದಲ್ಲಿ ಸ್ಕೂಟರ್ ಸವಾರರಾದ ಯುವಕರಿಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಉದುಮ ಪ್ಯಾಕಾರ ದೊಡ್ಡಿಪಳ್ಳ  ಸಮೀಪದ ತೆಂಗಿನಕಾಯಿ ಕೊಯ್ಯುವ ಕಾರ್ಮಿಕ ಮಣಿ-ರಜನಿ ದಂಪತಿ ಪುತ್ರ ಪ್ರಜೇಶ್ (26) ಮತ್ತು ಉದುಮ ಬಾರ ಬಂಗನ ಹೌಸ್‌ನ  ಮುಹಮ್ಮದ್ ಅಮೀನ್ (ಮಿಥುನ್) (24) ಎಂಬವರು ಸಾವನ್ನಪ್ಪಿದ್ದಾರೆ. ಇವರಿಬ್ಬರು ಸ್ಕೂಟರ್‌ನಲ್ಲಿ ಮಂಗಳೂರು ಭಾಗದಿಂದ ಕಾಸರಗೋಡಿನತ್ತ ಬರುತ್ತಿದ್ದಾಗ ಶಿರಿಯ ಸೇತುವೆ ಬಳಿ ಸ್ಕೂಟರ್ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯ ಸಂರಕ್ಷಣಾ ಗೋಡೆಗೆ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಪ್ರಜೇಶ್‌ರನ್ನು ತಕ್ಷಣ ಕುಂಬಳೆ ಸಹಕಾರಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಗಂಭೀರ ಗಾಯಗೊಂಡ ಮುಹಮ್ಮದ್ ಅಮೀನ್‌ರನ್ನು ಮೊದಲು ಬಂದ್ಯೋಡಿನ ಖಾಸಗಿ ಆಸ್ಪತಗೆ ನಂತರ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಿದರೂ ಫಲಕಾರಿ ಯಾಗದೆ ಅವರು ಕೂಡಾ ಮೃತಪಟ್ಟರು. ಕುಂಬಳೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖ ನಡೆಸಿದರು. ಈ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಜೇಶ್ ಹೆತ್ತವರ ಹೊರತಾಗಿ ಸಹೋದರಿ ರೇಶ್ಮಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೊಹಮ್ಮದ್ ಅಮೀನ್ (ಮಿಥುನ್) ನೀಲೇಶ್ವರದ ಮೋಹನನ್-ಮೋಹಿನಿ ದಂಪತಿ ಪುತ್ರನಾಗಿದ್ದಾರೆ.

RELATED NEWS

You cannot copy contents of this page