ನರೇಂದ್ರ ಮೋದಿ ಆಡಳಿತಕ್ಕೆ 12 ವರ್ಷ :ಬಿಜೆಪಿಯಿಂದ ‘ವಿಕಸಿತ ಭಾರತಂ’ ಸಮಾವೇಶ

ಕಾಸರಗೋಡು: ನರೇಂದ್ರ ಮೋದಿ ಸರಕಾರದ 12ನೇ ವಾರ್ಷಿಕಾಚರಣೆಯಂಗವಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ನವಭಾರತ ಸದಸ್ ಎಂಬ ಹೆಸರಲ್ಲಿ ‘ವಿಕಸಿತ ಭಾರತಂ’ ಸಮಾವೇಶ ಆಯೋಜಿಸಲಾಯಿತು. ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಉದ್ಘಾಟಿಸಿದರು.

ವಿಶ್ವದ ೧೦ನೇ ಆರ್ಥಿಕ ಶಕ್ತಿಯಾಗಿದ್ದ ಭಾರತವನ್ನು ಕೇವಲ 12 ವರ್ಷಗಳಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸಾಧ್ಯವಾಗಿದೆ ಎಂದು ಅಶ್ವಿನಿ ಅಭಿಪ್ರಾಯಪಟ್ಟರು. ಭ್ರಷ್ಟಾಚಾರ, ಆಡಳಿತ ಪರವಾದ ಅಸ್ಥಿರತೆಗಳಿಂದ ಹಾನಿಗೊಂಡಿದ್ದ ಭಾರತಕ್ಕೆ ಆರ್ಥಿಕವಾದ ಉತ್ತೇಜನ ಲಭಿಸಿರುವುದು ನರೇಂದ್ರ ಮೋದಿ ಆಡಳಿತ ಕಾಲದಲ್ಲಾಗಿದೆ. ಜನಕ್ಷೇಮ ಯೋಜನೆಗಳ ಜೊತೆಗೆ ಬೃಹತ್ ನಿರ್ಮಾಣ ಯೋಜನೆಗಳನ್ನು ಜ್ಯಾರಿಗೊಳಿಸಲಾಯಿತು. ವಂದೇ ಭಾರತ್‌ನಿಂದ ಆರಂಭಿಸಿ ಬುಲ್ಲೆಟ್ ಟ್ರೈನ್‌ಗಳವರೆಗೂ, ಯುದ್ಧ ವಿಮಾನದಿಂದ ತೊಡಗಿ ಸೆಮಿ ಕಂಡೆಕ್ಟರ್‌ಗಳವರೆಗೂ ಸ್ಥಳೀಯವಾಗಿ ನಿರ್ಮಿಸಲು ಭಾರತಕ್ಕೆ ಸಾಧ್ಯವಾಗಿದೆ. ಮಾಹಿತಿ ತಾಂತ್ರಿಕ, ವಿಜ್ಞಾನ ವಲಯಗಳ ಪ್ರಗತಿ ವಿಕಸಿತ ಭಾರತಂ ಎಂಬ ಉದ್ದೇಶವನ್ನು 2047ರಲ್ಲಿ ಹೊಂದಲು ಭಾರತಕ್ಕೆ ಸಹಾಯಕವಾಗಬಹುದೆಂದು ಅಶ್ವಿನಿ ಅಭಿಪ್ರಾಯಪಟ್ಟರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನುಲಾಲ್ ಮೇಲತ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಜಿಲ್ಲಾ ಉಪಾಧ್ಯಕ್ಷ ಎಂ. ಬಲ್‌ರಾಜ್, ಕರ್ಷಕಮೋರ್ಛಾ ರಾಜ್ಯ ಉಪಾಧ್ಯಕ್ಷ ಕುಂಞಿಕಣ್ಣನ್ ಬಳಾಲ್, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ, ಜಿಲ್ಲಾ ಕೋಶಾಧಿಕಾರಿ ವೀಣ ಅರುಣ್ ಶೆಟ್ಟಿ, ಜಿಲ್ಲಾ ಸೆಲ್ ಕೋ-ಆರ್ಡಿನೇಟರ್ ಸುಕುಮಾರ್ ಕುದ್ರೆಪ್ಪಾಡಿ ಸಹಿತ ಬಿಜೆಪಿ, ಮೋರ್ಛಾ ಪದಾಧಿಕಾರಿಗಳು ಭಾಗವಹಿಸಿದರು.

ಸಮಾವೇಶಕ್ಕೆ ಮುಂಚಿತವಾಗಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಸಂಸ್ಮರಣೆ, ಪುಷ್ಪಾರ್ಚನೆ ನಡೆಸಲಾಯಿತು.

You cannot copy contents of this page