ಮರಬಿದ್ದು ಮನೆ ಹಾನಿಗೊಂಡು ಸಂಕಷ್ಟದಲ್ಲಿದ್ದ ದಂಪತಿಗೆ ಕಲ್ಕಿ ಮಂಜೇಶ್ವರ ಸಹಾಯಹಸ್ತ

ಮಂಜೇಶ್ವರ: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಹೊಸಂಗಡಿ ಬಳಿಯ ಮಜಿಬೈಲು ನಿವಾಸಿ ಕೇಶವ ಹಾಗೂ ಲಲಿತಾ ದಂಪತಿಯ ಹೆಂಚು ಹಾಸಿದ ಮನೆಯ ಮೇಲ್ಛಾವಣಿಗೆ ಮರ ಬಿದ್ದು ಹಾನಿಯುಂಟಾಗಿದ್ದು, ಈ ಸಂಕಷ್ಟದ ಸಂದರ್ಭದಲ್ಲಿ ಕಲ್ಕಿ ಮಂಜೇಶ್ವರ ತಂಡ ಸ್ಪಂದಿಸಿ ಮನೆ ದುರಸ್ತಿ ಕಾರ್ಯಕ್ಕೆ ನೆರವಾಗಿ ಮಾನವೀಯತೆ ಮೆರೆದಿದೆ. ಸುಮಾರು 7೦,೦೦೦ ರೂ. ವೆಚ್ಚದಲ್ಲಿ ದುರಸ್ತಿ ಕಾರ್ಯ ನೆರವೇರಿದ್ದು, ಈ ಮಹತ್ಕಾರ್ಯಕ್ಕೆ ಟೀಮ್‌ನ ಸಹೃದಯಿ ದಾನಿಗಳು ಹಾಗೂ ಚಕ್ರವರ್ತಿ ಹೊಸಂಗಡಿ ಸಂಸ್ಥೆ ಸಹಕರಿಸಿದೆ. ಈ ಸಹಾಯ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ ಚಲನಚಿತ್ರ ನಟ ಭವೀಶ್ ಶೆಟ್ಟಿ ಎಕ್ಕೂರು, ಮಂಜೇಶ್ವರ ಪಂಚಾಯತ್ ಮಾಜಿ ಸದಸ್ಯ ಹರೀಶ್ಚಂದ್ರ ಮಂಜೇಶ್ವರ, ಟೀಮ್ ಕಲ್ಕಿ ಮುಖ್ಯಸ್ಥ ಅಖಿಲ್ ಶೆಟ್ಟಿ, ಸಂಸ್ಥಾಪಕ ಅರುಣ್ ಕುಮಾರ್ ದುರ್ಗಿಪಳ್ಳ, ಅಧ್ಯಕ್ಷ ರಂಜಿತ್ ಕುಮಾರ್, ಚಕ್ರವರ್ತಿ ಹೊಸಂಗಡಿ ಸಂಸ್ಥೆಯ ಉಪಾಧ್ಯಕ್ಷ ಸುರೇಶ್ ಗಾಣಿಂಜಾಲ್, ಅಕ್ಷಯ್ ಕುಮಾರ್ ಈ ವೇಳೆ ಉಪಸ್ಥಿತರಿದ್ದರು.

You cannot copy contents of this page