ಕಾರಸಗೋಡು: ಅಂತಾರಾಷ್ಟ್ರೀ ಯ ಯೋಗ ದಿನಾಚರಣೆಯ ಅಂಗವಾಗಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಾರಸಗೋಡು ಸೇವಾ ಕೇಂದ್ರದಲ್ಲಿ ಯೋಗ ದಿನಾಚರಣೆ ಆಯೋಜಿಸಲಾಯಿತು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾಸರ ಗೋಡು ಸಂಚಾಲಕಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿ ಮಾತ ನಾಡಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸಂಸ್ಥೆಯಲ್ಲಿ ಪ್ರತಿನಿತ್ಯ ರಾಜಯೋಗ ಅಭ್ಯಸಿಸುವ ಮೂಲಕ ಜೀವನದಲ್ಲಿ ಯಶಸ್ವಿ ಪಾತ್ರವನ್ನು ಮುನ್ನಡೆಸಬಹುದು. ಇಂದಿನ ಜೀವನಶೈಲಿಯಲ್ಲಿ ಮಾನಸಿಕ ಶಾಂತಿ, ಆತ್ಮಬಲ ಮತ್ತು ಸಕಾರಾತ್ಮಕ ಚಿಂತನೆಗಾಗಿ ರಾಜಯೋಗ ಧ್ಯಾನದ ಮಹತ್ವ ಅತ್ಯಗತ್ಯವಾಗಿದ್ದು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಆಧ್ಯಾತ್ಮಿಕ ಸಂದೇಶ ಹಿರಿದಾದುದು ಎಂದರು.
ಕೇರಳ ವಿದ್ಯುತ್ ಪ್ರಸರಣ ಆಯೋಗದ ಹಿರಿಯ ಅಭಿಯಂತ ನಾಗರಾಜ್ ಹಾಗೂ ಯೋಗ ಫಾರ್ ಕಿಡ್ಸ್ ಸಂಸ್ಥೆಯ ಯೋಗ ಶಿಕ್ಷಕಿ ತೇಜಕುಮಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಬಿ.ಕೆ.ಪ್ರದೀಪ್ ಶುಭಹಾರೈಸಿದರು. ಬ್ರಹ್ಮಕುಮಾರ ನಿತ್ಯಾನಂದ ಸ್ವಾಗತಿಸಿ, ಬಿ.ಕೆ. ವಿಜಯಲಕ್ಷ್ಮಿ ಬ್ರಹ್ಮಕುಮಾರಿ ಸಂಸ್ಥೆಯ ಪರಿಚಯ ನೀಡಿದರು. ಬ್ರಹ್ಮಕುಮಾರಿ ಕೃಪಾ ಯೋಗನೃತ್ಯ ಪ್ರದರ್ಶಿಸಿದರು. ಬ್ರಹ್ಮಕುಮಾರ ಡಾ. ಸುಬ್ರಮಣ್ಯ ಸಿ.ಪಿ.ಸಿ.ಆರ್.ಐ ವಂದಿಸಿದರು. ಬ್ರಹ್ಮಕುಮಾರಿ ಕವಿತ ನಿರೂಪಿಸಿದರು.
ಬ್ರಹ್ಮಕುಮಾರಿ ಮಂಗಳ ಮತ್ತು ಪ್ರೇಮ ಅತಿಥಿಗಳಿಗೆ ಈಶ್ವರೀಯ ಕಾಣಿಕೆ ನೀಡಿ ಸನ್ಮಾನಿಸಿದರು. ಸ್ಥಳೀಯ ಗಣ್ಯರು, ಮಹಿಳೆಯರು ಹಾಗೂ ಸಾರ್ವಜನಿಕರು ಪಾಲ್ಗೊಂಡರು.






