ಆಪರೇಶನ್ ತೂಫಾನ್ ಕಾರ್ಯಾಚರಣೆ: ಮೈಲಾಟಿಯಲ್ಲಿ ಪಾನ್ ಮಸಾಲೆ ನಿರ್ಮಾಣ ಘಟಕ ಪತ್ತೆ: ಇಬ್ಬರ ಸೆರೆ

ಕಾಸರಗೋಡು: ಆಪರೇಶನ್ ತೂಫಾನ್ ದಿ ನರ್ಕೋ ಹಂಟ್‌ನಂತೆ ಮೈಲಾಟಿ220 ಕೆವಿ ವಿದ್ಯುತ್ ಸಬ್ ಸ್ಟೇಶನ್ ಪಕ್ಕದ ರಾಷ್ಟ್ರೀಯ ಹೆದ್ದಾರಿ ಬಳಿಯ ಕಟ್ಟಡವೊಂದರಲ್ಲಿ  ಮೇಲ್ಪ ರಂಬ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳದಲ್ಲಿ ನಿಷೇಧ ಹೇರಲಾಗಿರುವ ತಂಬಾಕು ಉತ್ಪನ್ನಗಳ ನಿರ್ಮಾಣ ಘಟಕವನ್ನು ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ಕೂಡ್ಲು ಮೀಪುಗುರಿಯ ಸಿ.ಎಂ. ಜಾಫರ್ (32) ಮತ್ತು ಬದಿಯಡ್ಕದ ಮೊಹಮ್ಮ ದ್ ಹಾರೀಸ್ (29) ಎಂಬಿಬ್ಬರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೇಲ್ಪರಂಬ   ಠಾಣೆಯ ಇನ್‌ಸ್ಪೆಕ್ಟರ್ ಎನ್.ಪಿ. ರಾಘವನ್ ನೇತೃತ್ವದ ತಂಡ ನಿನ್ನೆ ಈ ಕಾರ್ಯಾಚರಣೆ ನಡೆಸಿದೆ. ಈ ಅನಧಿಕೃತ ಪಾನ್ ಮಸಾಲೆ ನಿರ್ಮಾಣ ಘಟಕದಿಂದ ಉತ್ಪನ್ನಗಳನ್ನು  ಪ್ಯಾಕಿಂಗ್ ಮಾಡುವ ಯಂತ್ರ, ಉತ್ಪಾದನಾ ಘಟಕ, ಕಂಪ್ರೆಸ್ ಯಂತ್ರ ಹಾಗೂ 15,000  ತಂಬಾಕು ಉತ್ಪನ್ನಗಳ ಪ್ಯಾಕೆಟ್ ಗಳನ್ನು ಪೊಲೀಸರು ಪತ್ತೆಹಚ್ಟಿ ವಶಪಡಿಸಿಕೊಂಡಿ ದ್ದಾರೆ. ತಂಬಾಕು ಉತ್ಪನ್ನಗಳ ಪ್ಯಾಕೆಟ್ ಗಳನ್ನು 14 ಗೋಣಿ ಚೀಲಗಳಲ್ಲಾಗಿ ತುಂಬಿಸಿಡಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.ಇಲ್ಲಿ ಅನಧಿಕೃತವಾಗಿ ಪಾನ್ ಮಸಾಲೆ ತಯಾರಿ ಘಟಕ ಕಾರ್ಯವೆಸಗುತ್ತಿದೆ ಯೆಂಬ ಗುಪ್ತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಅದರಂತೆ ಪೊಲೀಸರು ಈ ಕೇಂದ್ರಕ್ಕೆ ನಿನ್ನೆ ಸಂಜೆ ದಾಳಿ ನಡೆಸಿದ್ದಾರೆ.

ಈ ಘಟಕ ಕಾರ್ಯವೆಸಗುತ್ತಿದ್ದ ಕಟ್ಟಡದಲ್ಲಿ ಕ್ಲೀನಿಂಗ್ ಉತ್ಪನ್ನಗಳನ್ನು ನಿರ್ಮಿಸಲಾಗುತ್ತಿದ್ದು, ಅದರ ಮರೆಯಲ್ಲಿ ಈ ಅಕ್ರಮ ಪಾನ್ ಮಸಾಲೆ ನಿರ್ಮಾಣ ಘಟಕ ಕಾರ್ಯವೆಸಗುತ್ತಿತ್ತೆಂದೂ ಈ ವಿಷಯ ಆ ಪರಿಸರದವರಿಗೂ ತಿಳಿದಿರ ಲಿಲ್ಲವೆಂದು ಪೊಲೀಸರು ಹೇಳಿದ್ದಾರೆ.

ಈ ಘಟಕದಲ್ಲಿ ವಲಸೆ ಕಾರ್ಮಿಕರು ದುಡಿಯುತ್ತಿದ್ದು ಪಾನ್ ಮಸಾಲೆ ತಯಾರಿಸಲು ಅಗತ್ಯವಿರುವ ಸಾಮಗ್ರಿಗಳನ್ನು ವಿವಿಧ ಕೇಂದ್ರಗಳಿಂದ ಇಲ್ಲಿಗೆ ತರಿಸಲಾಗುತ್ತಿದೆ. ಪಾನ್ ಮಸಾಲೆಯನ್ನು ರಾತ್ರಿ ವೇಳೆ  ಕೇರಳದ ವಿವಿಧ ಜಿಲ್ಲೆಗಳಿಗೆ ಸಾಗಿಸಲಾಗುತ್ತಿದೆ. ಇದರ ಹೊರತಾಗಿ ಈ ತಂಡ ಗಲ್ಫ್‌ಗೂ ಇಂತಹ ಸಾಮಗ್ರಿಗಳನ್ನು ಸಾಗಿಸುತ್ತಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿ ದ್ದಾರೆ. ದಾಳಿ ವೇಳೆ ಕಲ್ಲಿಕೋಟೆ-ಖತ್ತರ್ ಎಂಬ ಹೆಸರಲ್ಲಿ ಸಾಗಿಸಲು ತಯಾರಿಸಿ  ಇರಿಸಲಾಗಿದ್ದ ತಂಬಾಕು ಉತ್ಪನ್ನಗಳ ಪ್ಯಾಕೆಟ್  ಒಳಗೊಂಡ  ಗೋಣಿಚೀಲ ಗಳು ಪತ್ತೆಯಾಗಿದೆಯೆಂದೂ ಪೊಲೀಸರು ತಿಳಿಸಿದ್ದಾರೆ.

ಕ್ಲೀನಿಂಗ್ ಉತ್ಪನ್ನಗಳನ್ನು ನಿರ್ಮಿಸುವ ಹೆಸರಲ್ಲಿ ಕಳೆದ ಜನವರಿ ಯಲ್ಲಿ ಇಲ್ಲಿ ಈ ಘಟಕ ಆರಂಭಿಸಲಾ ಗಿತ್ತೆಂದುತನಿಖೆಯಲ್ಲಿ ಸ್ಪಷ್ಟಗೊಂಡಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಸ್.ಐಗಳಾದ ಟಿ. ಅಖಿಲ್, ಶೈಜು,  ಎಎಸ್‌ಐಗಳಾದ ಕೆ. ಮನು, ಮತ್ತು ಜಯಪ್ರಕಾಶ್ ಎಂಬವರು ಒಳಗೊಂಡಿದ್ದರು.

You cannot copy contents of this page