ಕಾಸರಗೋಡು: 16ರ ಹರೆಯದ ಬಾಲಕಿಯನ್ನು ಹೋಮ್ ಸ್ಟೇಗೆ ಕರೆದೊಯ್ದು ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾದ ಯುವಕನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬಾಲಕಿಗೆ ಕಿರುಕುಳ ನೀಡಿದ ಆರೋಪದಂತೆ 23ರ ಹರೆಯದ ಅರ್ಜುನ್ ಎಂಬಾತನ ವಿರುದ್ಧ ಅಂಬಲತ್ತರ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂ ಡಿದ್ದರು. ಆದರೆ ಘಟನೆ ನಡೆದಿರುವುದು ರಾಜಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಾದುದರಿಂದ ಪ್ರಕರಣವನ್ನು ಅಲ್ಲಿಗೆ ಸ್ಥಳಾಂತರಿ ಸಲಾಗಿದೆ. ಬಾಲಕಿಯೊಂದಿಗೆ ಯುವಕ ಸ್ನೇಹದಲ್ಲಿದ್ದನೆನ್ನಲಾಗಿದೆ. ಇದರ ನೆಪದಲ್ಲಿ ಬಾಲಕಿಯನ್ನು ಆತ ಹೋಮ್ ಸ್ಟೇಗೆ ಕರೆದೊಯ್ದು ಕಿರುಕುಳ ನೀಡಿರವುದಾಗಿ ದೂರಲಾಗಿದ.





