ಕಾಸರಗೋಡು: ದುಬಾಯಿಗೆ ಹೋಗಲೆಂದು ಮನೆಯಿಂದ ಹೊರಟ ಯುವಕ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ವಿದ್ಯಾನಗರ ಬೆದಿರ ಖಲೀಲ್ ಹೌಸ್‌ನ ಎ.ಎ. ಉಬೈಸ್ (26) ನಾಪತ್ತೆಯಾದ ಯುವಕ. ಈ ಬಗ್ಗೆ ತಾಯಿ ನೀಡಿದ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ದುಬಾಯಿಗೆ ಹೋಗಲೆಂದು ಜೂನ್ 22ರಂದು ಸಂಜೆ 4 ಗಂಟೆಗೆ ಉಬೈಸ್ ಮನೆಯಿಂದ ಹೊರಟಿದ್ದರು. ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವುದಾಗಿ ಉಬೈಸ್ ಮನೆಯವರಲ್ಲಿ ತಿಳಿಸಿದ್ದರು. ಆದರೆ ಅವರಿಂದ ಉಬೈಸ್‌ನ ಕುರಿತು ಯಾವುದೇ ಮಾಹಿತಿ ಇಲ್ಲವೆಂದು ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.





