ಗುತ್ಯಡ್ಕದಲ್ಲಿ ಚಿರತೆ ಆತಂಕ : ಸಾಕುನಾಯಿಗಳೆರಡು ನಿಗೂಢ ನಾಪತ್ತೆ

ಬೆಳ್ಳೂರು: ಕರ್ನಾಟಕ- ಕೇರಳ ಗಡಿ ಪ್ರದೇಶವಾದ ಗುತ್ಯಡ್ಕದಲ್ಲಿ ಮನೆ ಸಮೀಪ ಕಟ್ಟಿಹಾಕಿದ್ದ ಎರಡು ಸಾಕುನಾಯಿಗಳು ನಿಗೂಢವಾಗಿ ನಾಪತ್ತೆಯಾಗಿದ್ದು, ಸ್ಥಳೀಯರಲ್ಲಿ ಚಿರತೆ ಭೀತಿ ತಲೆಯೆತ್ತಿದೆ. ಬೆಳ್ಳೂರು ಪಂಚಾಯತ್‌ನ ಕಾಯರ್‌ಪದವು ಮೂಲಕ ಕರ್ನಾಟಕದ ಈಶ್ವರಮಂ ಗಲವನ್ನು ಸಂಪರ್ಕಿಸುವ ಗಡಿ ಭಾಗದಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ಬೆಳಿಗ್ಗೆ ಮನೆಯವರು ನೋಡಿದಾಗ ಕಟ್ಟಿ ಹಾಕಿದ ನಾಯಿಗಳು ನಾಪತ್ತೆಯಾಗಿರುವುದು ಕಂಡು ಬಂದಿದೆ. ಆದರೆ ಜಾಗದಲ್ಲಿ ಯಾವುದೇ ರಕ್ತದ ಕಲೆ ಅಥವಾ ಕಾಡುಪ್ರಾಣಿ ದಾಳಿಯ ಕುರುಹು ಕಂಡು ಬಂದಿಲ್ಲ. ಅಲ್ಲದೆ ಈ ಪರಿಸರದಲ್ಲೆಲ್ಲೂ ನಾಯಿಗಳ ಅವಶಿಷ್ಟಗಳು ಕಂಡು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಹುಡು ಕಾಡಿದಾಗ ಕೆಲವು ಪ್ರಾಣಿಗಳ ಹೆಜ್ಜೆಗುರುತುಗಳು ಕಂಡು ಬಂದಿದ್ದು, ಇದು ಚಿರತೆಯದ್ದಾಗಿರಬಹುದೇ ಎಂಬ ಬಗ್ಗೆ  ದೃಢೀಕರಣಗೊಂಡಿಲ್ಲ. ನಾಟೆಕಲ್ಲು ಬಳಿಯ ಜಾಲಮೂಲೆ ಯಲ್ಲಿ ಇತ್ತೀಚೆಗೆ ಸಾಕುನಾಯಿಯೊಂ ದನ್ನು ಅಪರಿಚಿತ ಪ್ರಾಣಿ ತಿಂದ ಸ್ಥಿತಿಯಲ್ಲಿ ಅವಶಿಷ್ಟಗಳು ಪತ್ತೆಯಾ ಗಿತ್ತು. ಇದು ಚಿರತೆಯಾಗಿರಬೇಕೆಂದು ಶಂಕಿಸಲಾಗಿತ್ತು. ಈಗ ಗುತ್ಯಡ್ಕದಲ್ಲೂ ಸ್ಥಳೀಯರು ಆತಂಕಗೊಂಡಿದ್ದು ಸಾರ್ವಜನಿಕರು ಎಚ್ಚರಿಕೆ ಯಿಂದಿರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page