ವರ್ಕಾಡಿ: ವಿಜಯಾ ಬ್ಯಾಂಕ್‌ನ ನಿವೃತ್ತ ಮೆನೇಜರ್ ಸೇನ್ಯ ಕಲ್ಲಾಡಿಗುತ್ತು ಎನ್. ತಿಮ್ಮಪ್ಪ ರೈ ನಾಣಿಲ್ತಡಿ (69) ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಆನೆಕಲ್ಲು ಛತ್ರ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ರಾಗಿದ್ದರು. ಅಲ್ಲದೆ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮಂಜೇಶ್ವರ, ಕುಂಬಳೆ, ಉಪ್ಪಿನಂಗಡಿ ಸಹಿತ ವಿವಿಧ ಕಡೆಗಳ ವಿಜಯಾ ಬ್ಯಾಂಕ್ ಶಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಕಲ್ಪನ, ಪುತ್ರಿ ಶರಣ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






