ಕುಂಬಳೆ: ಕುಂಬಳೆ ಪೇಟೆಗೆ ಆಗಮಿ ಸುವ ಪ್ರಯಾಣಿಕರು ಸಹಿತ ಸಾರ್ವ ಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊ ಳ್ಳಲು ಮುಂದಾ ಗದ ಪಂಚಾಯತ್ ಅಧಿಕಾರಿಗಳ ಕ್ರಮವನ್ನು ಪ್ರತಿಭಟಿಸಿ ಕುಂಬಳೆಯ ವ್ಯಾಪಾರಿಗಳು ರಂಗಕ್ಕಿಳಿದಿದ್ದಾರೆ. ಪ್ರಯಾಣಿಕರು ಹಾಗೂ ವ್ಯಾಪಾರಿಗಳು ಎದುರಿಸುತ್ತಿ ರುವ ಸಮಸ್ಯೆಗಳನ್ನು ಮುಂದಿರಿಸಿ ಬೀದಿಗಿಳಿದ ವ್ಯಾಪಾರಿಗಳು ಪಂ ಚಾಯತ್ನ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.
ಕುಂಬಳೆ ಪೇಟೆಗೆ ಆಗಮಿಸುವ ಪ್ರಯಾಣಿಕರು ಹಲವು ತಿಂಗಳು ಗಳಿಂದ ಎದುರಿಸುತ್ತಿರುವ ಸಮಸ್ಯೆಗ ಳನ್ನು ಕಂಡು ಸಹನೆಗೆಟ್ಟ ವ್ಯಾಪಾರಿಗಳು ಕುಂಬಳೆ ಪಂ ಚಾಯತ್ ಹಾಗೂ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ವ್ಯಾಪಾರ ಭವನದಲ್ಲಿ ಚಳವಳಿ ಘೋಷಣೆ ಸಮಾ ವೇಶ ನಡೆಸಿದ ಬಳಿಕ ಪೇಟೆಯಲ್ಲಿ ನೂರಾರು ವ್ಯಾಪಾರಿಗಳು ಒಗ್ಗೂಡಿ ಮೆರವಣಿಗೆ ನಡೆಸಿ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇನ್ನು ಕೂಡಾ ಪಂಚಾಯತ್ ಮುಂದಾಗದಿ ದ್ದಲ್ಲಿ ಚಳವಳಿ ತೀವ್ರಗೊಳಿಸುವುದಾಗಿ ವ್ಯಾಪಾರಿಗಳು ತಿಳಿಸಿದ್ದಾರೆ. ಮುಂದಿನ ಚಳವಳಿಯಂಗವಾಗಿ ಜುಲೈ ೨ರಂದು ಕುಂಬಳೆಯ ಎಲ್ಲಾ ವ್ಯಾಪಾರ ಸಂಸ್ಥೆಗಳನ್ನು ಮುಚ್ಚುಗಡೆಗೊಳಿಸಿ ಪಂಚಾಯತ್ ಕಚೇರಿಗೆ ಬಹುಜನ ಮಾರ್ಚ್ ನಡೆಸಲಾಗುವುದೆಂದು ತಿಳಿಸಲಾಗಿದೆ. ಪ್ರತಿಭಟನೆಯನ್ನು ರಾಜೇಶ್ ಮನಯತ್ತ್ ಉದ್ಘಾಟಿಸಿದರು. ಅನ್ವರ್ ಅಧ್ಯಕ್ಷತೆ ವಹಿಸಿದರು. ಸತ್ತಾರ್, ಸಂತೋಷ್, ಅಶ್ರಫ್, ಖಾದರ್ ಮಾತನಾಡಿದರು. ಮೆರವಣಿಗೆಗೆ ಹೈದರ್, ಮಮ್ಮಿಂಞಿ ಚಕ್ಕರ, ಸಿದ್ದಿಕ್ ಮುಬಾರಕ್, ಸವಾದ್, ಇರ್ಷಾದ್, ಮನೀಶ್ ನಾರಾಯಣ್, ಮಹೇಶ್ ಕುಮಾರ್, ಮನ್ಸೂರ್, ಲತೀಫ್, ಶಂಕರ ಗಟ್ಟಿ, ಅಬ್ಬಾಸ್ ನೇತೃತ್ವ ನೀಡಿದರು.






