ಕಾಸರಗೋಡು: ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತ ಹಾಗೂ ಸಾವು ನೋವು ಉಂಟಾಗುತ್ತಿರುವ ಘಟನೆಗಳು ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ,ಅಪ್ರಾಪ್ತರಿಗೆ ಚಲಾಯಿಸಲು ವಾಹನ ನೀಡುತ್ತಿರುವ ಅವರ ಹೆತ್ತವರು ಅಥವಾ ವಾಹನ ಮಾಲಕರ ವಿರುದ್ಧ ಪೊಲೀಸರು ಕಟ್ಟು ನಿಟ್ಟಿನ ಕಾನೂನು ಕ್ರಮ ಆರಂಭಿಸಿದ್ದಾರೆ. ಇದರಂತೆ ಇಬ್ಬರು ಅಪ್ರಾಪ್ತರಿಗೆ ಚಲಾಯಿಸಲು ವಾಹನ ನೀಡಿದ ಅವರ ಹೆತ್ತವರ ವಿರುದ್ಧ ವಿದ್ಯಾನಗರ ಪೊಲೀಸರು ಎರಡು ಪ್ರಕರಣ ದಾಖಲಿಸಿ ಆ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೇ ರೀತಿ ಕುಂಬಳೆ ಪೊಲೀಸರು ಇಂತಹ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇದರಂತೆ ಅಪ್ರಾಪ್ತನಿಗೆ ಚಲಾಯಿಸಲು ಸ್ಕೂಟರ್ ನೀಡಿದ ಬಂದ್ಯೋಡು ನಿವಾಸಿಯ ವಿರುದ್ಧವೂ, ಅಪ್ರಾಪ್ತನಿಗೆ ಚಲಾಯಿಸಲು ಸ್ಕೂಟರ್ ನೀಡಿದ ಅದರ ಮಾಲಕಿ ಆರಿಕ್ಕಾಡಿ ನಿವಾಸಿ ಯಾದ ಮಹಿಳೆಯೋರ್ವಳ ವಿರುದ್ಧ ಹಾಗೂ ಅಪ್ರಾಪ್ತನಿಗೆ ಚಲಾಯಿಸಲು ಕಾರು ನೀಡಿದ ಬಾಡೂರು ಮಣಿಯಂ ಪಾರದ ಓರ್ವರ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಆ ಮೂರು ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೇ ರೀತಿ ೧೭ರ ಕರೆಯದ ಬಾಲಕನಿಗೆ ಚಲಾಯಿಸಲು ನೀಡಿದ ಕಾರು ಆತನ ತಾಯಿ ಬೇಕಲ ನಿವಾಸಿ ವಿರುದ್ಧ ಬೇಕಲ ಪೊಲೀಸರು ಪ್ರಕರಣ ದಾಖಲಿಸಿ ಆ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೇ ರೀತಿಯ ಕಾರ್ಯಾಚರಣೆಯನ್ನು ಜಿಲ್ಲೆಯಾದ್ಯಂತ ಎಲ್ಲೆಡೆಗಳಲ್ಲಿ ಪೊಲೀಸರು ಆರಂಭಿಸಿದ್ದಾರೆ.






