ತಳಂಗರೆಯಲ್ಲಿ ಯುವಕನ ಕೊಲೆ: ಎಲ್ಲಾ ಆರೋಪಿಗಳ ಸೆರೆ; ಬಂಧಿತರಲ್ಲಿ ಓರ್ವ ಹಲವು ಪ್ರಕರಣಗಳ ಆರೋಪಿ

ಕಾಸರಗೋಡು: ತಳಂಗರೆ ಕಡವತ್‌ನ ಕಟ್ಟಡದೊಳಗೆ ಯುವಕನ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಕೊಲೆಗೈದ ಪ್ರಕರಣದಲ್ಲಿ ಮತ್ತಿಬ್ಬರನ್ನು ಬಂಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣದ ಎಲ್ಲಾ ಆರೋಪಿಗಳು ಸೆರೆಗೀಡಾಗಿದ್ದಾರೆ. ಬೆಂಗಳೂರಿನಲ್ಲಿ ದರೋಡೆ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಕರ್ನಾಟಕ ನಿವಾಸಿ ಅಫ್ರೀದ್ ಖಾನ್ (24), ಈತನ ಸಹಚರರಾದ ವಿನೋದ್ ರಾಜಾರಾಮ್ ಕಾಂಬ್ಳೆ (36), ಅಮೃತ್ ಬೋಳಿ ಶೆಟ್ಟಿ (33) ಎಂಬಿವರು ಸೆರೆಗೀಡಾದ ಆರೋಪಿಗಳಾಗಿದ್ದಾರೆ. ರಿಮಾಂಡ್‌ನಲ್ಲಿರುವ ಆರೋಪಿಗಳನ್ನು ಗುರುತು ಹಚ್ಚುವ ಪರೇಡ್‌ಗೊಳಪಡಿಸಲಿರುವ ಕ್ರಮಗಳಿಗೆ ಪೊಲೀಸರು ಚಾಲನೆ ನೀಡಿದ್ದಾರೆ.

ಕರ್ನಾಟಕದ ದಾವಣಗೆರೆ ನಿವಾಸಿಯಾದ ನಜೀಮುಲ್ಲ (50) ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ. ಹಣ ವ್ಯವಹಾರದ ಹೆಸರಲ್ಲಿ ಮದ್ಯಪಾನ ಮಧ್ಯೆ ಉಂಟಾದ ತರ್ಕ ಯುವಕನ ಕೊಲೆ ಯಲ್ಲಿ ಕೊನೆಗೊಂಡಿತ್ತು. ಕೊಲೆಗೀ ಡಾದ ನಜೀಮುಲ್ಲ ಹಾಗೂ ಇತರ ಮೂರು ಮಂದಿ ಬೆಂಗಳೂರಿನಲ್ಲಿ ಪರಿಚಯಗೊಂಡಿದ್ದರು. ಅನಂತರ ಈ ತಿಂಗಳ ಮೊದಲ ವಾರ ತಳಂಗರೆಗೆ ತಲುಪಿದ ತಂಡ ಕಡವತ್‌ನ ಕಟ್ಟಡವೊಂದರ ಮೇಲಂತಸ್ತಿನಲ್ಲಿ ಬಾಡಿಗೆಗೆ ಕೊಠಡಿ ಪಡೆದುಕೊಂಡಿತ್ತು. ಎರಡು ದಿನಗಳ ಕಾಲ ಮೀನುಗಾರಿಕೆ ಕೆಲಸಕ್ಕೆ ಹೋದ ಈ ನಾಲ್ವರು ರಾತ್ರಿ ಹೊತ್ತಿನಲ್ಲಿ ಕೊಠಡಿಯಲ್ಲಿ ತಂಗಿದ್ದರು. ಈ ವೇಳೆ ಮದ್ಯ ಸೇವಿಸುತ್ತಿದ್ದ ತಂಡದೊಳಗೆ  ಹಣದ ಹೆಸರಲ್ಲಿ ಇವರೊಳಗೆ ವಾಗ್ವಾದವುಂಟಾಗಿದ್ದು, ಈ ವೇಳೆ ನಜೀಮುಲ್ಲರನ್ನು ಬಟ್ಟೆಯಿಂದ ಕುತ್ತಿಗೆ ಬಿಗಿದು ಆರೋಪಿಗಳು ಕೊಲೆ ಗೈದಿದ್ದರು. ಬಳಿಕ ಆರೋಪಿಗಳು ಕೊಠ ಡಿಯ ಬಾಗಿಲು ಮುಚ್ಚಿ ಪರಾರಿಯಾ ಗಿದ್ದರು. ಕೊಠಡಿಯಿಂದ ದುರ್ನಾತ ಬೀರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ನೋಡಿದಾಗ ಯುವಕನ ಮೃತದೇಹ ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ನಡೆಸಿದ ತನಿಖೆಯಲ್ಲಿ ಇದು ಕೊಲೆಕೃತ್ಯವೆಂದು ಸಾಬೀತುಗೊಂ ಡಿತ್ತು. ಕೊಲೆಗೀಡಾದ ವ್ಯಕ್ತಿ ಹಾಗೂ ಕೊಲೆಗೈದ ಆರೋಪಿಗಳನ್ನು ಗುರುತು ಹಚ್ಚಲು ಯಾವುದೇ ಪುರಾವೆಗಳು ಲಭಿ ಸದಂತೆ ಮಾಡಿ ತಂಡ  ಕಾಸರಗೋ ಡಿನಿಂದ ಪರಾರಿಯಾಗಿತ್ತು.  ಆರೋಪಿ ಗಳು ನಡೆದು ಹೋಗುವ ಸಿಸಿ ಟಿವಿ ದೃಶ್ಯಗಳು ಮಾತ್ರವೇ ತನಿಖಾ ತಂಡಕ್ಕೆ ಲಭಿಸಿತ್ತು. ಇದರ ಆಧಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೇಲ್ನೋಟದಲ್ಲಿ ನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಮೆಲ್ಬಿನ್ ಜೋಸ್‌ರ ನೇತೃತ್ವದಲ್ಲಿ ರೂಪೀಕರಿಸಿದ ಪ್ರತ್ಯೇಕ ತಂಡ ನಡೆಸಿದ  ಕಾರ್ಯಾಚರಣೆಯಲ್ಲಿ ಮೊದಲು ಕೊಲೆಗೀಡಾದ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಿದೆ. ಅನಂತರ ನಡೆಸಿದ ಸಮಗ್ರ ತನಿಖೆಯಲ್ಲಿ ಆರೋಪಿಗಳು ಯಾರೆಂದೂ ಪತ್ತೆಹಚ್ಚಲು ಸಾಧ್ಯವಾಯಿತು.

You cannot copy contents of this page