ತಿರುವನಂತಪುರ: ಅಂತ್ಯೋದಯ ಅನ್ನ ಯೋಜನೆ (ಎಎವೈ) ಪ್ರಕಾರ ಹಳದಿ ರೇಶನ್ ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬಗಳಿಗೆ ಇನ್ನು ಉಚಿತ ವಾಗಿ 35 ಕಿಲೋದಂತೆ ಅಕ್ಕಿ ಲಭಿ ಸದು. ಇದಕ್ಕೆ ಹೊಂದಿಕೊಂಡು 2023ರ ಆಹಾರ ಭದ್ರತಾ ಕಾನೂನಿನಲ್ಲಿ ಅಗತ್ಯದ ತಿದ್ದುಪಡಿ ತರಲು ಕೇಂದ್ರ ಸರಕಾರ ಮುಂದಾಗಿದೆ. ಜ್ಯಾರಿಯಲ್ಲಿ ಹಳದಿ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರ ಸಂಖ್ಯೆ ಪರಿಗಣಿಸದೆ ತಲಾ 35 ಕಿಲೋದಂತೆ ಉಚಿತವಾಗಿ ವಿತರಿಸಲಾಗುತ್ತಿದೆ. ಈ ರೀತಿ ಬದಲಾಯಿಸಲು ಕೇಂದ್ರ ಸರಕಾರ ಮುಂದಾಗಿದೆ. ಇದರಂತೆ ಹಳದಿ ಕಾರ್ಡ್ನಲ್ಲಿ ಹೆಸರು ಹೊಂದಿರುವ ಪ್ರತೀ ಸದಸ್ಯರಿಗೆ ತಲಾ ಏಳು ಕಿಲೋ ಮಾತ್ರವೇ ಉಚಿತ ಅಕ್ಕಿ ಲಭಿಸಲಿದೆ. ಇದೇ ಸಂದರ್ಭದಲ್ಲಿ ಇಂತಹ ಒಂದು ಕುಟುಂಬಕ್ಕೆ ಗರಿಷ್ಠ ಲಭಿಸುವ ಅಕ್ಕಿ ಪ್ರಮಾಣ 35 ಕಿಲೋ ದಂತೆ ಇನ್ನೂ ಮುಂದುವರಿಯಲಿದೆ.
ಇದೇ ವೇಳೆ ಹಳದಿ ಕಾರ್ಡ್ ನಲ್ಲಿರುವ ಸದಸ್ಯರ ಸಂಖ್ಯೆ ಐದಕ್ಕಿಂತ ಕಡಿಮೆ ಇದ್ದಲ್ಲಿ ಅಂತಹ ಕುಟುಂಬದ ಪ್ರತೀ ಸದಸ್ಯರಿಗೆ ಏಳು ಕಿಲೋದಷ್ಟು ಮಾತ್ರವೇ ಉಚಿತ ಅಕ್ಕಿ ಲಭಿಸಲಿದೆ. ಪರಿಷ್ಕೃತ ಯೋಜನೆ ಪ್ರಕಾರ ಒಂದು ಹಳದಿ ಕಾರ್ಡ್ನಲ್ಲಿ ಇಬ್ಬರು ಸದಸ್ಯರಿದ್ದಲ್ಲಿ ಆ ಕುಟುಂಬಕ್ಕೆ ತಲಾ 7 ಕಿಲೋದಂತೆ ಒಟ್ಟು 14 ಕಿಲೋ ಮಾತ್ರವೇ ಉಚಿತವಾಗಿ ಲಭಿಸಲಿದೆ. ಇದೇ ವೇಳೆ ಇಂತಹ ಕಾರ್ಡ್ನಲ್ಲಿ ಐದಕ್ಕಿಂತ ಹೆಚ್ಚು ಸದಸ್ಯರಿದ್ದಲ್ಲಿ ಆ ಕುಟುಂಬಕ್ಕೆ ಗರಿಷ್ಠ ೩೫ ಕಿಲೋ ಅಕ್ಕಿ ಉಚಿತವಾಗಿ ಲಭಿಸಲಿದೆ.
ಆದ್ಯತಾ ವಿಭಾಗ (ಪಿಂಕ್ ಕಾರ್ಡ್) ವಿಭಾಗದ ಪ್ರತೀ ರೇಶನ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಪ್ರತೀ ಸದಸ್ಯರಿಗೆ ತಲಾ ಐದು ಕಿಲೋದಂತೆ ಉಚಿತ ಅಕ್ಕಿ ಲಭಿಸುತ್ತಿದೆ. ಆದರೆ ಹಳದಿ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಐದಕ್ಕಿಂತ ಹೆಚ್ಚು ಸದಸ್ಯರಿದ್ದಲ್ಲಿ ಅವರಿಗೆ ಗರಿಷ್ಠ ೩೫ ಕಿಲೋ ಅಕ್ಕಿ ಮಾತ್ರವೇ ಲಭಿಸಲಿದೆ. ಅಂತಹ ಕುಟುಂಬಗಳಿಗೆ ಪಿಂಕ್ ಕಾರ್ಡ್ನ ಸದಸ್ಯರಿಗಿಂತಲೂ ಕಡಿಮೆ ಪ್ರಮಾಣದ ಅಕ್ಕಿ ಲಭಿಸುವಂತೆ ಮಾಡಲಿದೆ ಎಂದು ಕೇರಳ ಸರಕಾರ ಹೇಳುತ್ತಿದೆ. ಆದ್ದರಿಂದ ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಕೇರಳ ಕೇಂದ್ರದೊಂದಿಗೆ ಆಗ್ರಹಪಟ್ಟಿದೆ.
ಕೇರಳದಲ್ಲಿ ಒಟ್ಟು 19.31 ಲಕ್ಷ ಮಂದಿ ಸೇರಿದಂತೆ ದೇಶದಲ್ಲಿ ಒಟ್ಟಾರೆಯಾಗಿ 7.76 ಕೋಟಿ ಫಲಾನುಭವಿಗಳು ಅಂತ್ಯೋದಯ ಅನ್ನ ಯೋಜನೆಯಲ್ಲಿ ಒಳಗೊಂಡಿದ್ದಾರೆ.





