ಬಿಆರ್‌ಪಿಎಂಎಸ್ ಜಿಲ್ಲಾ ಸಮ್ಮೇಳನ, ಕುಟುಂಬ ಸಂಗಮ

ಕಾಸರಗೋಡು: ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾಸಂಘ್ (ಬಿಆರ್‌ಪಿಎಂಎಸ್) ಕಾಸರಗೋಡು ಜಿಲ್ಲಾ ಸಮ್ಮೇಳನ ಹಾಗೂ ಕುಟುಂಬ ಸಂಗಮ ಚಟ್ಟಂಚಾಲ್ ತೈರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಂಘಟನೆಯ ರಾಜ್ಯಾಧ್ಯಕ್ಷ ಎಂ. ವಿಜಯ ಕುಮಾರ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದರು.

ಆರ್‌ಎಸ್‌ಎಸ್ ಹಿರಿಯ ಪ್ರಚಾರಕ್ ಎ.ಸಿ. ಗೋಪಿನಾಥ್ ಪ್ರಧಾನ ಭಾಷಣ ಮಾಡಿದರು. ಬಿಆರ್‌ಪಿಎಂಎಸ್ ರಾಜ್ಯ ಮುಖಂಡರಾದ ಸಿ.ಎಚ್. ಸುರೇಶ್, ಕೆ. ದಯಾನಂದ, ರಾಜಲಕ್ಷ್ಮಿ, ಕುಂಞಮ್ಮ, ಪಿ.ಆರ್. ಮುರಳೀಧರನ್, ಎಸ್.ಎಸ್. ಸುರೇಶ್ ಕುಮಾರ್, ರಘು ಕುಮಾರ್ ನಾಯರ್, ಕೆ. ಕೃಷ್ಣನ್ ಕುಟ್ಟಿ, ರವೀಂದ್ರನ್ ಚಾತಂಗೈ, ಎ. ಮುರಳೀಧರನ್, ಕೆ. ಮಾಧವನ್ ನಾಯರ್, ಕೆ.ಎಂ. ಮಾಧವ ಭಟ್, ಬೇಬಿ, ಉಮಾದೇವಿ, ಎ. ಬಾಲಕೃಷ್ಣನ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಕೆ. ಶ್ರೀಕಂಠನ್ ನಾಯರ್ ಸ್ವಾಗತಿಸಿ, ಜಿಲ್ಲಾ ಜೊತೆ ಕಾರ್ಯದರ್ಶಿ ಪಿ. ಪ್ರದೀಪ್ ಕುಮಾರ್ ವಂದಿಸಿದರು.

RELATED NEWS

You cannot copy contents of this page