ಪೈವಳಿಕೆಯಲ್ಲಿ ತ್ಯಾಜ್ಯ ಸಮಸ್ಯೆ:ಡಿವೈಎಫ್‌ಐಯಿಂದ 29ರಂದು ಪಂಚಾಯತ್ ಧರಣಿ

ಪೈವಳಿಕೆ: ಪೈವಳಿಕೆ ಪಂಚಾ ಯತ್‌ನ ಅವೈಜ್ಞಾನಿಕ ತ್ಯಾಜ್ಯ ವಿಲೇ ವಾರಿ ಕ್ರಮದ ವಿರುದ್ಧ, ವಿಲೇವಾರಿ ಕೇಂದ್ರಗಳಲ್ಲಿ ತಿಂಗಳುಗಳಿAದ ಶೇಖರಣೆಗೊಂಡಿರುವ ತ್ಯಾಜ್ಯವನ್ನು ತುರ್ತಾಗಿ ತೆರವುಗೊಳಿಸಬೇಕು, ಮುಂಗಾರು ಪೂರ್ವ ಸ್ವಚ್ಛತಾ ಕಾರ್ಯಗಳಲ್ಲಿ ಅಧಿಕಾರಿಗಳು ತೋರಿದ ತೀವ್ರ ನಿರ್ಲಕ್ಷ್ಯವನ್ನು ಖಂಡಿಸಿ ಡಿಪಿs ಮಂಜೇಶ್ವರ ಬ್ಲಾಕ್ ಸಮಿತಿಯ ನೇತೃತ್ವದಲ್ಲಿ ಪಂಚಾಯತ್ ಕಚೇರಿ ಧರಣಿ ಹಮ್ಮಿಕೊಳ್ಳಲಾಗಿದೆ. ಜೂನ್ 29ರಂದು ಬೆಳಗ್ಗೆ ೧೦ಕ್ಕೆ ಪೈವಳಿಕೆ ವಿಲೇಜ್ ಕಚೇರಿ ಆವರಣದಿಂದ ಯುವಜನ ಮೆರ ವಣಿಗೆ ಆರಂಭವಾಗಲಿದೆ. ಹಸಿರು ಕ್ರಿಯÁ ಸೇನೆ ಸಂಗ್ರಹಿಸುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಯಾವುದೇ ಸಂಸ್ಕರಣೆ ಯಿಲ್ಲದೆ ವಿಲೇವಾರಿ ಕೇಂದ್ರಗಳಲ್ಲಿ ರಾಶಿ ಹಾಕಲಾಗುತ್ತಿದೆ. ಮಳೆ ಜೋರಾದ ಕಾರಣ ಈ ಕೇಂದ್ರಗಳು ಸಾಂಕ್ರಾಮಿಕ ರೋಗಗಳ ಉಗಮ ಸ್ಥಾನಗಳಾಗಿ ಬದಲಾಗಿವೆ. ಡೆಂಗ್ಯೂ, ಇಲಿಜ್ವರ ಸೇರಿದಂತೆ ವಿವಿಧ ರೋಗ ಗಳು ಪಂಚಾಯತ್‌ನಲ್ಲಿ ವ್ಯಾಪಕವಾಗಿ ಹರಡುತ್ತಿದ್ದರೂ ಆಡಳಿತ ಸಮಿತಿ ಕಣ್ಣುಮುಚ್ಚಿ ಕುಳಿತಿದೆ. ಎಂಸಿಎಪ್s ಕೇಂದ್ರಗಳನ್ನು ಸ್ವಚ್ಛಗೊಳಿಸುವುದು, ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸುವುದು, ಹಸಿರು ಕ್ರಿಯÁ ಸೇನೆಗೆ ಕನಿಷ್ಠ ವೇತನ ಮತ್ತು ಸುರಕ್ಷಾ ಸಾಮಗ್ರಿಗಳನ್ನು ಖಚಿತಪಡಿಸುವುದು, ವಾರ್ಡ್ ಮಟ್ಟದ ಜಾಗೃತಿ ಸಮಿತಿ ಗಳನ್ನು ಸಕ್ರಿಯಗೊಳಿಸುವುದು ಸೇರಿ ದಂತೆ ವಿವಿಧ ಬೇಡಿಕೆಗಳನ್ನು ಮುಂ ದಿಟ್ಟು ಪ್ರತಿಭಟನೆ ನಡೆಸಲಾಗುತ್ತಿದೆ. ಒಂದು ವಾರದೊಳಗೆ ಕ್ರಮ ಕೈಗೊಳ್ಳದಿ ದ್ದರೆ ಇನ್ನಷ್ಟು ಬಲವಾದ ಜನಾಂ ದೋಲನ ಕಾರ್ಯಕ್ರಮಗಳೊಂದಿಗೆ ಮುಂದುವರಿಯುವುದಾಗಿ ಡಿಪಿs ಮಂಜೇಶ್ವರ ಬ್ಲಾಕ್ ಸಮಿತಿ ಎಚ್ಚರಿಕೆ ನೀಡಿದೆ.

RELATED NEWS

You cannot copy contents of this page