ಕುಂಬಳೆ: ಕರ್ನಾಟಕ ನಿರ್ಮಿತ ಮದ್ಯ ಸಹಿತ ಓರ್ವನನ್ನು ಬಂಧಿಸಲಾಗಿದೆ. ಕಡಂಬಾರು ಅಂಗಡಿಪದವು ನಿವಾಸಿ ಬಿ.ಎಂ. ಅನಿಲ್ ಕುಮಾರ್ ಎಂಬಾತನನ್ನು ಕುಂಬಳೆ ರೇಂಜ್ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ಎ.ಬಿ. ಅಬ್ದುಲ್ಲ ನೇತೃತ್ವದ ತಂಡ ಬಂಧಿಸಿದೆ. ನಿನ್ನೆ ಬೆಳಿಗ್ಗೆ ಅಂಗಡಿಪದವಿನಿಂದ ಈತನನ್ನು ಬಂಧಿಸಲಾಗಿದೆ. ಆರೋಪಿಯ ಕೈಯಿಂದ 1.35 ಲೀಟರ್ ಕರ್ನಾಟಕ ಮದ್ಯ ವಶಪಡಿಸಿಕೊಂಡಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈತನ ವಿರುದ್ಧ ಕುಂಬಳೆ ರೇಂಜ್ನಲ್ಲಿ ೫ ಅಬಕಾರಿ ಪ್ರಕರಣಗಳು ದಾಖಲಾ ಗಿರುವುದಾಗಿ ತಿಳಿಸಲಾಗಿದೆ. ಸಿವಿಲ್ ಎಕ್ಸೈಸ್ ಅಫೀಸರ್ಗಳಾದ ವಿ.ಜಿ ತಿನ್, ಪಿ. ಪ್ರಜಿತ್, ಕಣ್ಣನ್ಕುಂಞಿ, ಚಾಲಕ ಪಿ.ಎ. ಕ್ರಿಸ್ಚಿನ್ ಎಂಬಿವರು ಅಬಕಾರಿ ತಂಡದಲ್ಲಿದ್ದರು.





