ಹಲವು ಮಕ್ಕಳಿಗೆ ಕಿರುಕುಳ ನೀಡಿದ ಪ್ರಕರಣ: ಬೇಕಲದಿಂದ ತಲೆಮರೆಸಿಕೊಂಡಿದ್ದ ಮದ್ರಸ ಅಧ್ಯಾಪಕ ಬಿಹಾರದಲ್ಲಿ ಸೆರೆ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪೋಕ್ಸೋ ಪ್ರಕರಣಗಳಲ್ಲಿ ಆರೋಪಿ ಯಾದ  ಮದ್ರಸ ಅಧ್ಯಾಪಕ ಸೆರೆಗೀಡಾಗಿದ್ದಾನೆ.  ಬಿಹಾರದಲ್ಲಿ ತಲೆಮರೆಸಿಕೊಂಡಿದ್ದ ಮಲಪ್ಪುರಂ  ಆದವನಾಡ್ ನಿವಾಸಿ ಯಾದ ಎಂ.ಕೆ.ಮೊಹಮ್ಮದ್ ಎಂಬಾತನನ್ನು ವಳಾಂಜೇರಿ ಪೊಲೀಸರು ಬಂಧಿಸಿದ್ದಾರೆ.

ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಹಮ್ಮದ್ ಮದ್ರಸ ಅಧ್ಯಾಪಕನಾಗಿದ್ದನು.  ಪ್ರಾಯಪೂರ್ತಿ ಯಾಗದ ಇಬ್ಬರು ಮಕ್ಕಳಿಗೆ ಕಿರುಕುಳ ನೀಡಿದ ಘಟನೆಯಲ್ಲಿ ಈತನ ವಿರುದ್ಧ ಬೇಕಲ ಪೊಲೀಸರು ಎರಡು ಪೋಕ್ಸೋ ಕೇಸುಗಳನ್ನು ದಾಖಲಿಸಿಕೊಂಡಿದ್ದರು.  ಅಷ್ಟರಲ್ಲಿ ಈತ ತಲೆಮರೆಸಿಕೊಂಡಿ ದ್ದನು. ಇದೇ ವೇಳೆ ಮಲಪ್ಪುರದ ಮದ್ರಸವೊಂದರ ೧೪ ಮಕ್ಕಳಿಗೆ ಎಂ.ಕೆ.ಮೊಹಮ್ಮದ್ ಕಿರುಕುಳ ನೀಡಿರುವುದಾಗಿ ದೂರು ಲಭಿಸಿತ್ತು. ಇದರಿಂದ ವಳಾಂಜೇರಿ ಪೊಲೀಸರು ಮೊಹಮ್ಮದ್ ವಿರುದ್ಧ ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದರು. ಅನಂತರ ಬೇಕಲದಿಂದ ತಲೆಮರೆಸಿಕೊಂಡಿದ್ದ ಎಂ.ಕೆ. ಮೊಹಮ್ಮದ್‌ನನ್ನು ಹುಡುಕಿ ವಳಾಂಜೇರಿ ಪೊಲೀಸರು ಬಿಹಾರಕ್ಕೆ ತೆರಳಿದ್ದು ಅಲ್ಲಿಂದ ಆತನನ್ನು ಬಂಧಿಸಲಾಗಿದೆ. ಆರೋಪಿಯನ್ನು ಊರಿಗೆ ತಲುಪಿಸಿ ಸಮಗ್ರ ತನಿಖೆ ನಡೆಸುವುದರೊಂದಿಗೆ ಹೆಚ್ಚಿನ ಮಾಹಿತಿಗಳು ಬೆಳಕಿಗೆ ಬರಲಿದೆಯೆಂದು ಪೊಲೀಸರು ನಿರೀಕ್ಷೆಯಿರಿಸಿದ್ದಾರೆ.

RELATED NEWS

You cannot copy contents of this page