ಗೃಹಿಣಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಗೃಹಿಣಿಯೋರ್ವೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಪೈಕ ಚಾಮುಂಡಿಮೂಲೆ ನಿವಾಸಿಯೂ ನೆಲ್ಲಿಕಟ್ಟೆಯಲ್ಲಿ ಅಡಿಕೆ ವ್ಯಾಪಾರಿಯಾಗಿರುವ  ಶಂಕರ ಎಂಬವರ ಪತ್ನಿ ಚಿತ್ರಕಲಾ (41) ಸಾವಿಗೀಡಾದ ಮಹಿಳೆ. ನಿನ್ನೆ ಮಧ್ಯಾಹ್ನ ವೇಳೆ ಇವರು ಮನೆಯ ಬಚ್ಚಲು ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲವೆಂದು ಸಂಬಂಧಿಕರು ತಿಳಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಕಾಸರ ಗೋಡು ಜನರಲ್ ಆಸ್ಪತ್ರೆಯಲ್ಲಿ  ನಡೆಸಲಾಯಿತು. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂ ಡಿದ್ದಾರೆ.  ಗೋಸಾಡ ನಿವಾಸಿ  ದಿ| ರಾಮ ಪಾಟಾಳಿ-ಪರಮೇಶ್ವರಿ ದಂಪತಿಯ  ಪುತ್ರಿಯಾದ ಮೃತರು ಪತಿ, ಮಕ್ಕಳಾದ ಪ್ರತ್ಯೂಷ್, ಪ್ರಖ್ಯಾತ್, ಸಹೋದರ ರಾದ ವಿಜಯ, ಶ್ರೀಕಾಂತ್, ಹರಿಶ್ಚಂದ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page