ರಂಗಭಾನು ತರಬೇತಿ ಕಾರ್ಯಾಗಾರಕ್ಕೆ ಮಂಜೇಶ್ವರ ಗೋವಿಂದ ಪೈ ಕಾಲೇಜಿನಲ್ಲಿ ಚಾಲನೆ

ಮಂಜೇಶ್ವರ: ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜುನಲ್ಲಿ ರಂಗಚೇತನ ಕಾಸರಗೋಡು ಇದರ ವತಿಯಿಂದ ೧೫ ದಿನಗಳ ರಂಗಭೂಮಿ ಪ್ರಾಯೋಗಿಕ ತರಬೇತಿ ಕಾರ್ಯಾಗಾರ ಆರಂಭ ಗೊಂಡಿತು. ರಂಗಚೇತನ ಕಾಸರಗೋಡು ಸಂಸ್ಥೆಯ ಅಧ್ಯಕ್ಷ ಡಾ. ಯತೀಶ್ ಕುಮಾರ್ ರೈ ಮುಳ್ಳೇರಿಯ ಉದ್ಘಾಟಿಸಿ ದರು. ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಮಹಮ್ಮ ದಲಿ ಅಧ್ಯಕ್ಷತೆ ವಹಿಸಿದರು. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಶಿವಶಂಕರ ಸ್ವಾಗತಿಸಿ, ಪ್ರಸ್ತಾಪಿಸಿದರು. ರಂಗಚೇತನ ಉಪಾಧ್ಯಕ್ಷ ವಿಜಯ ಕುಮಾರ್ ಪಾವಳ ಶುಭ ಕೋರಿದರು.ರಂಗಚೇತನ ಕಾಸರಗೋಡು ಇದರ ಸದಸ್ಯ, ‘ರಂಗಭಾನು’ ನಿರ್ದೇಶಕ ದಿವಾಕರ ಬಲ್ಲಾಳ್ ಎ.ಬಿ. ನಿರೂಪಿಸಿದರು. ಕಾರ್ಯದರ್ಶಿ ಗೋಪಾಲ ಕಾಟುಕುಕ್ಕೆ ವಂದಿಸಿದರು. ಶಿಬಿರದ ಸಂಚಾಲಕರಾದ ವಸಂತ ಮೂಡಂಬೈಲು, ಶಿವಪ್ರಸಾದ್ ಚೆರುಗೋಳಿ, ನಾಟಕ ನಿರ್ದೇಶಕ ಸದಾಶಿವ ಬಾಲಮಿತ್ರ ಭಾಗವಹಿಸಿದರು. ಕಾರ್ಯಾಗಾರದಲ್ಲಿ ವಿವಿಧ ನಾಟಕ ತಜ್ಞರು, ನಿರ್ದೇಶಕರು, ಕಲಾವಿದರು ತರಬೇತಿ ನೀಡುವರು. ರಂಗಭೂಮಿಯ ಅಭಿನಯ, ಧ್ವನಿ, ದೇಹಭಾಷೆ, ರಂಗ ವಿನ್ಯಾಸ, ನಾಟಕ ಪ್ರದರ್ಶನದ ಕುರಿತು ವಿಶೇಷ ತರಬೇತಿ ಆಯೋಜಿಸಲಾಗಿದೆ.

ಜುಲೈ ಮೊದಲ ವಾರದವರೆಗೆ ಶಿಬಿರ ನಡೆಯಲಿದೆ. ಸಮಾರೋಪ ದಿನ ದಂದು ತರಬೇತಿ ಪಡೆದ ವಿದ್ಯಾರ್ಥಿ ಗಳಿಂದ ನಾಟಕ ಪ್ರದರ್ಶನವಿರಲಿದೆ.

RELATED NEWS

You cannot copy contents of this page