ಕಾಸರಗೋಡು: ವಿಶ್ವ ರೆಫ್ರಿ ಜರೇಶನ್ ದಿನಾಚರಣೆಯಂಗವಾಗಿ ಎಚ್‌ವಿಎಸಿಆರ್‌ಇ ಅಸೋಸಿಯೇ ಶನ್ ಕಾಸರಗೋಡು ತಾಲೂಕು ಸಮಿತಿ ನೇತೃತ್ವದಲ್ಲಿ ಮಾದರಿ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು. ಕಾಸರಗೋಡು ನಗರ ಠಾಣೆಯ ಏರ್ ಕಂಡೀಶನರ್‌ಗಳನ್ನು ಸಂಘಟನೆಯ ನೇತೃತ್ವದಲ್ಲಿ ಉಚಿತವಾಗಿ ಸರ್ವೀಸ್ ಮಾಡಿಕೊಡಲಾಯಿತು. ಹಗಲಿರುಳು ಜನರಿಗಾಗಿ ಸೇವೆ ಮಾಡುವ ಪೊಲೀಸ್ ಅಧಿಕಾರಿಗಳಿಗಾಗಿ, ಠಾಣೆಯ ಕಂಟ್ರೋ ಲ್ ರೂಮ್‌ನಲ್ಲಿರುವ ಎಸಿಗಳನ್ನು ಉಚಿತವಾಗಿ ಸರ್ವೀಸ್ ಮಾಡಲಾಗಿದೆ.
ಸಂಘಟನೆಯ ಕಾಸರಗೋಡು ತಾಲೂಕು ಅಧ್ಯಕ್ಷ ಅಶ್ವತ್ಥ್‌ರಾಜ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಾರ್ಯದರ್ಶಿ ಬ್ಲೆಸ್ಸನ್ಸ್ ಶುಭ ಹಾರೈಸಿದರು. ರಾಜ್ಯ ಕೌನ್ಸಿಲ್ ಸದಸ್ಯ ಕಿಶೋರ್ ಕುಮಾರ್, ಜಿಲ್ಲಾಧ್ಯಕ್ಷ ಅಮೀರ್ ಅಲಿ ಮಾತನಾಡಿದರು. ತಾಲೂಕು ಕೋಶಾಧಿಕಾರಿ ಶರತ್ ವಂದಿಸಿದರು. ಉಪಾಧ್ಯಕ್ಷ ದೀಕ್ಷಿತ್, ಜಂಟಿ ಕಾರ್ಯದರ್ಶಿ ಪುರಂದರ, ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಇತರರು ಭಾಗವಹಿ ಸಿದರು. ಸಂಘಟನೆಯ ಕೆಲಸವನ್ನು ಟೌನ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ನಳಿನಾಕ್ಷನ್ ಪಿ, ಪಿಆರ್‌ಒ ಸುರೇಶ್, ಎಎಸ್‌ಐ ದೀಪಕ್ ಶ್ಲಾಘಿಸಿದರು.





