ಉಪ್ಪಳ: ಆಪರೇಶನ್ ತೂಫಾನ್ ಕಾರ್ಯಾಚರಣೆಯ ಅಂಗವಾಗಿ ಮಂಜೇಶ್ವರ ಪೊಲೀಸರು ನಡೆಸಿದ ದಾಳಿಯಲ್ಲಿ ಎಂಡಿಎಂಎ ಸಹಿತ ಯುವಕನನ್ನು ಸೆರೆ ಹಿಡಿಯಲಾಗಿದೆ. ಹೊಸಬೆಟ್ಟುನಲ್ಲಿರುವ ಮಂಜೇಶ್ವರ ಪಂಚಾಯತ್ ಕಚೇರಿ ಸಮೀಪದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಹಂಸ ನೀರಾಳ (46) ಎಂಬಾತ ಸೆರೆಗೀಡಾದ ವ್ಯಕ್ತಿ. ಈತ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪಾಂಡವರಕಲ್ಲು ನಿವಾಸಿಯಾಗಿದ್ದಾನೆ. ಈತ ವಾಸಿಸುವ ಕ್ವಾರ್ಟರ್ಸ್ ನಲ್ಲಿ ಮಾದಕವಸ್ತು ಬಚ್ಚಿಡಲಾಗಿದೆ ಎಂದು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮಂಜೇಶ್ವರ ಎಸ್‌ಐ ವೈಷ್ಣವ್ ರಾಮಚಂದ್ರನ್‌ರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಹಂಸನ ಬೆಡ್‌ರೂಂನ ಮಂಚದ ಬದಿಯಲ್ಲಿ ಬಚ್ಚಿಡಲಾಗಿದ್ದ 4.240 ಗ್ರಾಂ ಎಂಡಿಎಂಎ ಪತ್ತೆಯಾ ಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





