ಅಡೂರು: ಕೆಲಸಕ್ಕೆ ತೆರಳುತ್ತಿ ರುವುದಾಗಿ ಮನೆ ಮಂದಿಯಲ್ಲಿ ತಿಳಿಸಿ ಹೊರಟ ವ್ಯಕ್ತಿ ಕಾಡಿನೊಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಡೂರು, ಬಳವಂತಡ್ಕ ನಿವಾಸಿ ಮಣಿ ಯೂರ್ನಲ್ಲಿ ವಾಸಿಸುವ ಬಿ.ಸಿ. ಚಂದ್ರ (56) ಮೃತಪಟ್ಟವರು. ಕಲ್ಲುಕಟ್ಟುವ ಮೇಸ್ತ್ರಿಯಾಗಿದ್ದರು. ನಿನ್ನೆ ಬೆಳಿಗ್ಗೆ ಎಂದಿನಂತೆ ಮನೆಯಿಂದ ಹೊರಟಿದ್ದರೆನ್ನಲಾಗಿದೆ. ಅದರ ಬಳಿಕ ಬೇರೆ ಯಾರೂ ಇವರನ್ನು ನೋಡಿರಲಿಲ್ಲ. ಸಂಜೆ ಮೂರೂವರೆ ಗಂಟೆಯ ವೇಳೆಗೆ ಕಾಡಿನಿಂದ ಕಟ್ಟಿಗೆ ಸಂಗ್ರಹಿಸಲು ಹೋದವರು ಚಂದ್ರ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಆದೂರು ಪೊಲೀಸರಿಗೆ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಘಟನೆಯಲ್ಲಿ ಮಣಿಯೂರು ನಿವಾಸಿಯಾದ ರತನ್ ಕುಮಾರ್ ನಾಯ್ಕ್ ನೀಡಿದ ದೂರಿನಂತೆ ಆದೂರು ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ.
ಬಳವಂತಡ್ಕದ ದಿ| ಚನಿಯ ನಾಯ್ಕ್- ಲಕ್ಷ್ಮಿ ದಂಪತಿ ಪುತ್ರನಾದ ಚಂದ್ರ ಪತ್ನಿ ಭವಾನಿ, ಮಕ್ಕಳಾದ ಸಂಧ್ಯಾ, ಅರುಣ್, ಸತೀಶ, ರೋಹಿತ್, ಸರಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





