ಅಸೌಖ್ಯ ಬಾಧಿಸಿ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹ ಪಡೆದುಕೊಳ್ಳಲು ಹಿಂಜರಿದ ಸಂಬಂಧಿಕರು; ಜಿಲ್ಲಾ ಪಂ. ಸದಸ್ಯೆ ಇರ್ಫಾನ ಇಕ್ಭಾಲ್ ನೇತೃತ್ವದಲ್ಲಿ ಅಂತ್ಯಸಂಸ್ಕಾರ

ಉಪ್ಪಳ: ಗಂಭೀರ ಅಸೌಖ್ಯ ಬಾಧಿಸಿ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದು,  ಆದರಂ ಮೃತದೇಹವನ್ನು  ಪಡೆದು ಕೊಳ್ಳಲು ಸಂಬಂಧಿಕರಾರೂ ತಲು ಪಿಲ್ಲ. ಇದರಿಂದ ಜಿಲ್ಲಾ ಪಂಚಾ ಯತ್  ಸದಸ್ಯೆ ಇರ್ಫಾನ ಇಕ್ಬಾಲ್‌ರ  ನೇತೃತ್ವದಲ್ಲಿ  ವ್ಯಕ್ತಿ ಯ ಮೃತದೇಹವನ್ನು ಚಿತೆಗೇರಿ ಸಲಾಯಿತು.

ಮೀಂಜ ಪಂಚಾಯತ್‌ನ ಚಿಗುರುಪದವು ನಿವಾಸಿಯಾದ ನಾರಾಯಣ (64) ಎಂಬವರು ಮೃತಪಟ್ಟ ವ್ಯಕ್ತಿ. ಇವರಿಗೆ ಅರ್ಬುದ ಬಾಧಿಸಿತ್ತೆನ್ನಲಾಗಿದೆ. ಒಂದು ತಿಂಗಳ ಹಿಂದೆ ಊರಿನ ಅಂಗಡಿಯೊಂದರ ವರಾಂಡದಲ್ಲಿ  ಹಲವು ದಿನಗಳಕಾಲ ಮಲಗಿದ ಸ್ಥಿತಿಯಲ್ಲಿದ್ದರು. ಆಹಾರ ಕೂಡಾ ಸೇವಿಸದೆ ಚಿಂತಾಜನಕ ಸ್ಥಿತಿಯಲ್ಲಿದ್ದ ನಾರಾಯಣರ ಕುರಿತು ವಾರ್ಡ್ ಸದಸ್ಯ ಶರೀಫ್ ಚಿನಾಲ ಜಿಲ್ಲಾ ಪಂಚಾಯತ್  ಸದಸ್ಯೆಯೂ ಮಹಿಳಾ ಲೀಗ್ ನೇತಾರೆಯಾದ ಇರ್ಫಾನಾ ಇಕ್ಭಾಲ್‌ಗೆ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ತಲುಪಿದ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮೆಡಿಕಲ್ ಆಫೀಸರ್‌ಗೆ ಮಾಹಿತಿ ನೀಡಿದ್ದು, ಬಳಿಕ ಶೇಖ್ ಸಾಯಿದ್ ಫೌಂಡೇಶನ್ ಕಾರ್ಯಕರ್ತರು ಸ್ನಾನ ಮಾಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿ ದ್ದರು.  ಒಂದು ತಿಂಗಳ ಕಾಲ ಅಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದ ನಾರಾಯಣ ಕಳೆದ ಮಂಗಳವಾರ ಕೊನೆಯು ಸಿರೆಳೆದರು.

ನಾರಾಯಣ ಮೃತಪಟ್ಟ ವಿಷಯವನ್ನು ಪೊಲೀಸರು ಸಂಬಂಧಿಕರಿಗೆ ತಿಳಿಸಿದ್ದರು. ಆದರೆ ಮೃತದೇಹವನ್ನು ಪಡೆದುಕೊಳ್ಳಲು ಸಂಬಂಧಿಕರು ಯಾರೂ ಸಿದ್ದರಾಗ ಲಿಲ್ಲವೆನ್ನಲಾಗಿದೆ.

ನಾರಾಯಣರಿಗೆ ಇಬ್ಬರು ಪತ್ನಿಯರು, ಮಕ್ಕಳು ಹಾಗೂ ಸಹೋದರಿ ಇದ್ದಾರೆನ್ನಲಾಗಿದೆ. ಅವರು ಮೃತದೇಹ ಪಡೆದುಕೊಳ್ಳಲು ಮುಂದಾಗಿಲ್ಲವೆಂದು ಹೇಳಲಾಗುತ್ತಿದೆ. ಮೃತದೇಹವನ್ನು ಪಡೆದು ಅಂತ್ಯಸಂಸ್ಕಾರ ನಡೆಸುವಂತೆ ಜಿಲ್ಲಾ ಪಂಚಾಯತ್ ಸದಸೆ ಇರ್ಫಾನರಿಗೆ ಅವರು ಅನುಮತಿಪತ್ರ ನೀಡಿದ್ದಾರೆನ್ನಲಾಗಿದೆ. ಅನುಮತಿ ಪತ್ರವನ್ನು ಮೆಡಿಕಲ್ ಕಾಲೇಜು ಸುಪರಿಂಟೆಂಡೆಂಟ್‌ರಿಗೆ  ಹಸ್ತಾಂತರಿಸಲಾಯಿತು. ಇದರಂತೆ ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ಉಪ್ಪಳಕ್ಕೆ ತಲುಪಿಸಿ  ಚೆರುಗೋಳಿಯ ಹಿಂದೂ ರುದ್ರಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲಾಯಿತು.

ಇರ್ಫಾನ ಇಕ್ಬಾಲ್, ಸಾಮಾಜಿಕ ಕಾರ್ಯಕರ್ತರಾದ ರಿಯಾಸ್ ಪಿಲಾತ್ತರ, ಮೆಹಮೂದ್ ಕೈಕಂಬ ಮೊದಲಾದವರ ನೇತೃತ್ವದಲ್ಲಿ  ಚಿತೆ ಸಿದ್ಧಪಡಿಸಿ ಅಗ್ನಿಸ್ಪರ್ಶ ನಡೆಸಿ ಅಂತ್ಯಸಂಸ್ಕಾರ ನಡೆಸಲಾಯಿತು.

ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆಯಾದ ಇರ್ಫಾನ ಇಕ್ಬಾಲ್  ಅವರು ಒಡಹುಟ್ಟಿದವರೋ, ಮಕ್ಕಳೋ, ಸಂಬಂಧಿಕರೋ ಇಲ್ಲದೆ ಬೀದಿ ಪಾಲಾದ ಐವತ್ತರಷ್ಟು ಮಂದಿಯ ಸಂರಕ್ಷಣೆ ವಹಿಸಿಕೊಂಡಿರುವ  ಉಪ್ಪಳದ ಶೇಖ್ ಸಾಯಿದ್ ವೃದ್ಧ ಸದನದ ಸ್ಥಾಪಕರಾಗಿದ್ದಾರೆ. ಅವರು ನಡೆಸುತ್ತಿರುವ ಸಾಮಾಜಿಕ ಚಟುವಟಿಕೆಗೆ ಅಸಂಖ್ಯಾತ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. 

RELATED NEWS

You cannot copy contents of this page