ಕಾಸರಗೋಡು: ನೀಲೇಶ್ವರ ಕೋಟಪ್ಪುರಂನ ದೇವಸ್ಥಾನದಿಂದ ಕಾಣಿಕೆ ಹಣ ಕಳವು ನಡೆಸಿದ ಆರೋಪಿಯೋರ್ವ ಸೆರೆಗೀಡಾಗಿದ್ದಾನೆ. ಪತ್ತನಂತಿಟ್ಟ ನಿವಾಸಿ ವಿಷ್ಣು (32) ಎಂಬಾತ ಬಂಧಿತ ಆರೋಪಿ. ವಾಳಯಾರ್ ನಿಂದ ಈತನನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಮೇ ೨೪ರಂದು ಕೋಟಪ್ಪುರಂ ಶ್ರೀ ವೈಕುಂಠ ಕ್ಷೇತ್ರಕ್ಕೆ ನುಗ್ಗಿದ ಆರೋಪಿ ಆರು ಕಾಣಿಕೆ ಹುಂಡಿಗಳ ಬೀಗ ಮುರಿದು ಅಂದಾಜು 2೦ ಸಾವಿರ ರೂ. ಕಳವುಗೈದಿದ್ದನು. ರಾಜ್ಯದ ವಿವಿಧೆಡೆ ನಡೆದ ಕಳವು ಪ್ರಕರಣಗಳಲ್ಲಿ ಈತ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.







