ಹಗ್ಗ ಜಗ್ಗಾಟ ಕ್ರೀಡಾಪಟು ನೇಣು ಬಿಗಿದು ಮೃತ್ಯು

ಕಾಸರಗೋಡು: ರಾಷ್ಟ್ರೀಯ ಹಗ್ಗ ಜಗ್ಗಾಟ ಕ್ರೀಡಾಪಟು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಪುಲ್ಲೂರು ಎ.ಕೆ.ಜಿ. ಕ್ಲಬ್ ಸಮೀಪದ ನಿವಾಸಿ ಇಟ್ಟು ಯಾನೆ ಬೈಜು (37) ಮೃತಪಟ್ಟ ವ್ಯಕ್ತಿ. ಇವರು ಕಾಸರ ಗೋಡಿನಲ್ಲಿ ಮೊಬೈಲ್ ಟವರ್‌ನ ಸೆಕ್ಯೂ ರಿಟಿ ನೌಕರನಾಗಿದ್ದರು. ಶನಿವಾರ ಸಂಜೆ 4 ಗಂಟೆಗೆ ಇವರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ರಾಷ್ಟ್ರೀಯ ಹಗ್ಗಾ ಜಗ್ಗಾಟ ಪಂದ್ಯಾಟದಲ್ಲಿ ರಾಜ್ಯವನ್ನು ಪ್ರತಿನಿಧೀಕರಿಸಿ ಮೂರು ಬಾರಿ ಸ್ಪರ್ಧಿಸಿ ಪದಕ ಗೆದ್ದಿದ್ದರು. ಕಾಸರಗೋಡು ಜಿಲ್ಲಾಪರವಾಗಿ ಹಲವು ಬಾರಿ ರಾಜ್ಯ ಪಂದ್ಯಗಳಲ್ಲಿ ಭಾಗವಹಿಸಿದ್ದರು. ಸಿಪಿಎಂನ ಸಕ್ರಿಯ ಕಾರ್ಯಕರ್ತರಾದ ಇವರು ಎಕೆಜಿ ಪುಲ್ಲೂರು ಇದರ ಹಗ್ಗಜಗ್ಗಾಟ ಕ್ರೀಡಾಪಟುವಾಗಿದ್ದಾರೆ. ಹಲವು ಕ್ಲಬ್‌ಗಳ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದರು. ಮೃತರು ತಾಯಿ ವನಜ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page