ರಾ. ಹೆದ್ದಾರಿಯಲ್ಲಿ ಕರ್ತವ್ಯದಲ್ಲಿದ್ದಾಗ ಕಾರು ಢಿಕ್ಕಿ: ಕಾಲುಗಳನ್ನು ಕಳೆದುಕೊಂಡ ಪೊಲೀಸ್ ಅಧಿಕಾರಿ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದು ಗಾಯಗೊಂಡ ಸಿವಿಲ್ ಪೊಲೀಸ್ ಆಫೀಸರ್‌ರ ಎರಡೂ ಕಾಲುಗಳನ್ನು ತುಂಡರಿ ಸಬೇಕಾದ ಅತೀ ದಯನೀಯ ಸ್ಥಿತಿ ಉಂಟಾಗಿದೆ.

ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಪಿಲಿಕ್ಕೋಡ್ ನಿವಾಸಿ ಕೆ.ಎಂ. ಸೂರಜ್‌ರ ಕಾಲು ಗಳನ್ನು ಕತ್ತರಿಸಿ ತೆಗೆಯಲಾಯಿತು. ಬಲಕಾಲಿಗೆ ಶೇ. 70ರಷ್ಟು ಗಾಯವುಂ ಟಾಗಿತ್ತು. ಮೂರುಬಾರಿ ಶಸ್ತ್ರ ಚಿಕಿತ್ಸೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಈ ಕಾಲನ್ನು ಕತ್ತರಿಸಿ ತೆಗೆಯಲಾಯಿತು.ಕಾಲು ಕತ್ತರಿಸಿ ತೆಗೆಯಬೇಕಾಗಿ ಬಂದ ಇನ್ನೋರ್ವ ಸಿವಿಲ್ ಪೊಲೀಸ್ ಆಫೀಸರ್ ಚಿಟ್ಟಾರಿಕ್ಕಲ್ ಕುನ್ನುಂಕೈಯ ಅಲೋ ಶ್ಯಸ್ ಮ್ಯಾಥ್ಯೂರನ್ನು ಐಸಿಯುನಿಂದ ಕೊಠಡಿಗೆ ಸ್ಥಳಾಂತರಿಸಲಾಗಿದೆ. ಈ ತಿಂಗಳ 18ರಂದು ರಾಷ್ಟ್ರೀಯ ಹೆದ್ದಾರಿ ಪಡನ್ನಕ್ಕಾಡ್‌ನಲ್ಲಿ ಅಪಘಾತ ವುಂಟಾಗಿತ್ತು. ವಾಹನ ತಪಾಸಣೆಗಾಗಿ ರಸ್ತೆ ಬದಿ ಪೊಲೀಸ್ ಜೀಪು ನಿಲ್ಲಿಸಿದ ಬಳಿಕ ಅದರ ಹಿಂದೆ ಸಿವಿಲ್ ಪೊಲೀಸ್ ಆಫೀಸರ್‌ಗಳು ನಿಂತಿದ್ದರು. ಅಷ್ಟರಲ್ಲಿ ನಿಯಂತ್ರಣ ತಪ್ಪಿ ಬಂದ ಕಾರು ಅವರಿಗೆ ಢಿಕ್ಕಿ ಹೊಡೆದಿತ್ತು. ಸೂರಜ್ ಹಾಗೂ ಅಲೋಶ್ಯಸ್ ಮ್ಯಾಥ್ಯುರಿಗೆ ಢಿಕ್ಕಿ ಹೊಡೆದು ಬೀಳಿಸಿದ ಬಳಿಕ ಪೊಲೀಸ್ ಜೀಪಿಗೆ ಢಿಕ್ಕಿ ಹೊಡೆದು ಕಾರು ನಿಂತಿತ್ತು. ಎರಡೂ ವಾಹನಗಳ ಮಧ್ಯೆ ಸಿಲುಕಿಕೊಂಡ ಇವರು ಗಂಭೀರ ಗಾಯಗೊಂಡಿದ್ದರು. ಸೂರಜ್ ಹಾಗೂ ಅಲೋಶ್ಯಸ್ ಮ್ಯಾಥ್ಯು ಜಿಲ್ಲಾ ಹೆಡ್ ಕ್ವಾರ್ಟರ್ಸ್‌ನ ಸಿವಿಲ್ ಪೊಲೀಸ್ ಆಫೀಸರ್‌ಗಳಾಗಿದ್ದಾರೆ. ಅಲ್ಲದೆ ಸೂರಜ್ ಜಿಲ್ಲಾ ಪೊಲೀಸ್ ತಂಡದ ಫುಟ್ಭಾಲ್ ಆಟಗಾರನಾಗಿದ್ದರು. ಈ ಇಬ್ಬರ ಚಿಕಿತ್ಸಾ ಖರ್ಚು ಪೊಲೀಸ್ ವೆಲ್ಫೇರ್ ಫಂಡ್‌ನಿಂದ ವಿನಿಯೋಗಿಸುವಂತೆ ಗೃಹ ಸಚಿವ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ.

RELATED NEWS

You cannot copy contents of this page