ರಾಜಕೀಯ ಕಲಿಕೆ ನಿರಂತರ ಪ್ರಕ್ರಿಯೆ- ಕೆ. ರಂಜಿತ್

ಪೈವಳಿಕೆ : ಬಿಜೆಪಿ ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷ. ಪಕ್ಷದ ಸಿದ್ದಾಂತ, ತತ್ವ ಜೊತೆಗೆ ಚರಿತ್ರೆ ಮತ್ತು ಇತಿಹಾಸ ಹಾಗೂ ಪಕ್ಷದ ಮುಂದಿನ ಯೋಜನೆಗಳನ್ನು ಯುವ ಕಾರ್ಯಕರ್ತರು ಕಲಿತು ಪಕ್ಷದ ಕಾರ್ಯ ಚಟುವಟಿಕೆ ಮಾಡಿದರೆ ನಾಯಕತ್ವ ಗುಣ ಬೆಳೆಯುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಹೇಳಿದರು.
ಬಿಜೆಪಿ ಮಂಜೇಶ್ವರ ಮಂಡಲ ಪ್ರಶಿಕ್ಷಣ ಶಿಬಿರ ಸಜಂಕಿಲ ಆವಳ ಮಠ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ಗೈದರು.
ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ಮುಖಂಡರಾದ ಮಣಿಕಂಠ ರೈ, ಎ.ಕೆ ಕಯ್ಯಾರ್, ಲೋಕೇಶ್ ನೋಂಡ, ಸುನಿಲ್ ಪಿ ಆರ್, ಮುರಳೀಧರ ಯಾದವ್, ಸಲೀಲ್ ಮಾಸ್ಟರ್, ಯಾದವ ಬಡಾಜೆ, ಹರೀಶ್ಚಂದ್ರ ಎಂ ಉಪಸ್ಥಿತರಿದ್ದರು. ಸುಬ್ರಮಣ್ಯ ಭಟ್ ಆಟಿಕುಕ್ಕೆ ಸ್ವಾಗತಿಸಿ, ಯತೀರಾಜ್ ಶೆಟ್ಟಿ ವಂದಿಸಿದರು. ಗಣೇಶ್ ಪ್ರಸಾದ್ ಚೇರಾಲ್, ರಮೇಶ್ ಅಟ್ಟೆಗೋಳಿ, ಪ್ರವೀಣ್ ರೈ, ಕೀರ್ತಿ ಭಟ್ ನೇತೃತ್ವ ನೀಡಿದರು

You cannot copy contents of this page