ಮೊಬೈಲ್ ಫೋನ್ ಕವರ್‌ನೊಳಗೆ ಎಂಡಿಎಂಎ ಬಚ್ಚಿಟ್ಟು ಸಾಗಾಟ: ಯುವಕ ಸೆರೆ

ಕುಂಬಳೆ: ಮುಂಜಾನೆ ಹೊತ್ತಿನಲ್ಲಿ ರಸ್ತೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದ ಯುವಕನನ್ನು ಪೊಲೀಸರು ತಪಾಸಣೆ ನಡೆಸಿದಾಗ ಮೊಬೈಲ್ ಕವರ್‌ನೊಳಗೆ ಬಚ್ಚಿಟ್ಟಿದ್ದ ಮಾದಕವಸ್ತು ಪತ್ತೆಯಾಗಿದೆ. ಈ ಸಂಬಂಧ ನಾರಾಯಣಮಂಗಲ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಬಳಿಯ ಕೆ. ಬಿನೀಶ್ (29) ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಈತನ ಕೈಯಿಂದ 0.92 ಗ್ರಾಂ ಎಂ.ಡಿ.ಎಂ.ಎ ವಶಪಡಿಸಲಾಗಿದೆ. ನಿನ್ನೆ ಮುಂಜಾನೆ ೧ ಗಂಟೆಗೆ ನಾರಾಯಣಮಂಗಲ ರಸ್ತೆ ಬದಿ ಬೈಕ್ ನಿಲ್ಲಿಸಿ ಈತ ಕುಳಿತಿದ್ದನು. ಗಸ್ತು ನಡೆಸುತ್ತ ಅಲ್ಲಿಗೆ ಬಂದ ಪೊಲೀಸರನ್ನು ಕಂಡು ಬಿನೀಶ್ ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದನು. ಕೂಡಲೇ ಬೈಕ್ ತಡೆದು ನಿಲ್ಲಿಸಿ ಪೊಲೀಸರು ಪ್ರಶ್ನಿಸಿದಾಗ ತದ್ವಿರುದ್ಧ ಹೇಳಿಕೆ ನೀಡಿದ್ದಾನೆ. ಇದರಿಂದ ಸಂಶಯಗೊಂಡು ತಪಾಸಣೆ ನಡೆಸಿದಾಗ ಮೊಬೈಲ್ ಫೋನ್ ಕವರ್‌ನೊಳಗೆ ಎಂಡಿಎಂಎ ಪತ್ತೆಯಾಗಿದೆ. ಮಾರಾಟಕ್ಕಾಗಿ ಇದನ್ನು ತಂದಿರುವುದಾಗಿ ಬಂಧಿತ ಯುವಕ ಪೊಲೀಸರಲ್ಲಿ ತಿಳಿಸಿದ್ದಾನೆನ್ನಲಾಗಿದೆ.

ಕುಂಬಳೆ ಎಸ್.ಐ. ಕೆ.ಪಿ. ಗಣೇಶ್ ನೇತೃತ್ವದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಪ್ರಶಾಂತ್, ಸಿವಿಲ್ ಪೊಲೀಸ್ ಅಫೀಸರ್‌ಗಳಾದ ಜಯೇಶ್, ಜಾಬಿರ್ ಎಂಬಿವರು ಆಪರೇಶನ್ ತೂಪನ್ ಅಂಗವಾಗಿ ನಡೆಸಿದ ಕಾರ್ಯಾಚರಣೆ ವೇಳೆ ಮಾದಕವಸ್ತು ಪತ್ತೆಯಾಗಿದೆ.

You cannot copy contents of this page