ಬದಿಯಡ್ಕ: ಜ್ವರ ಹಾಗೂ ನ್ಯುಮೋನಿಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಕುಂಬ್ಡಾಜೆ ಮಲ್ಲಮೂಲೆ ನಿವಾಸಿಯೂ, ಬದಿಯಡ್ಕ ಚೆನ್ನಾರಕಟ್ಟೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ರೋಹಿಣಿ (35) ಮೃತಪಟ್ಟ ದುರ್ದೈವಿ. ತೀವ್ರ ಜ್ವರ ಹಾಗೂ ಕೆಮ್ಮು ಅನುಭವಗೊಂಡ ಇವರು ಒಂದು ವಾರ ಹಿಂದೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಿನ್ನೆ ಬೆಳಿಗ್ಗೆ 10 ಗಂಟೆ ವೇಳೆ ಜ್ವರ ಮತ್ತೆ ಉಲ್ಭಣಗೊಂಡು ಉಸಿರಾಟ ಸಮಸ್ಯೆ ಉಂಟಾಗಿತ್ತು. ಕೂಡಲೇ ಬದಿಯ ಡ್ಕದ ಆಸ್ಪತ್ರೆಗೂ, ನಂತರ ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂ ಡಿದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾ ಯಿತು. ಅಂತ್ಯ ಸಂಸ್ಕಾರ ಮಾನ್ಯದ ಸಾರ್ವಜನಿಕ ಸ್ಮಶಾನದಲ್ಲಿ ನಡೆಯಿತು.
ಪೆರ್ಲ ನಿವಾಸಿಯೂ, ಕೂಲಿ ಕಾರ್ಮಿಕನಾದ ಜಗದೀಶ್ ಎಂಬವರ ಪತ್ನಿಯಾದ ರೋಹಿಣಿ ಅಲ್ಪ ಕಾಲದಿಂದ ಕುಟುಂಬ ಸಹಿತ ಚೆನ್ನಾರಕಟ್ಟೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಮೃತರು ಮಕ್ಕಳಾದ ಅಶ್ವಿನಿ, ಅಶ್ವಿತ್, ಜುವನೇಶ್, ಭೂಮಿಕ (ಎಲ್ಲರೂ ವಿದ್ಯಾರ್ಥಿಗಳು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






