ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಯುವಕ ಸೆರೆ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಯುವಕನನ್ನು  ಬಂಧಿಸಲಾಗಿದೆ.  ಕಣ್ಣೂರು ಚೇಲೋರ ಕಾಪಿಟ್‌ನ ಕೆ.ಪಿ. ಶಾನಿಶ್ (35) ಎಂಬಾತನನ್ನು ನೀಲೇಶ್ವರ ಎಸ್‌ಐ ಕೆ. ಅಜಿತ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಕಾರಿನಿಂದ 1.8 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್‌ಸ್ಪೆಕ್ಟರ್ ಕೆ. ಮುರಳೀಧರನ್‌ರಿಗೆ ಲಭಿಸಿದ ಗುಪ್ತ ಮಾಹಿತಿಯ ಆಧಾರದಲ್ಲಿ ನಡೆಸಿದ ತಪಾಸಣೆ ವೇಳೆ ಯುವಕ ಸೆರೆಗೀಡಾಗಿದ್ದಾನ.

ನಿನ್ನೆ ರಾತ್ರಿ 9/40ರ ವೇಳೆ ನೀಲೇಶ್ವರ ಮಾರ್ಕೆಟ್ ಜಂಕ್ಷನ್‌ನಲ್ಲಿ ಪೊಲೀಸರು ಕಾರ್ಯಾಚರಣೆ ನಿರತರಾಗಿದ್ದ ವೇಳೆ ಅಲ್ಲಿಗೆ ಕಾರೊಂದು ತಲುಪಿತ್ತು. ಪೊಲೀಸರನ್ನು ಕಂಡೊಡನೆ ಕಾರನ್ನು  ತಿರುಗಿಸಿ ಪರಾರಿಯಾಗಲು ಯತ್ನಿಸಿದ್ದು, ಅಷ್ಟರಲ್ಲಿ ಪೊಲೀಸರು ಅದಕ್ಕೆ ತಡೆಯೊಡ್ಡಿ ಪರಿಶೀಲಿಸಿದಾಗ ಎಂಡಿಎಂಎ ಪತ್ತೆಯಾಗಿದೆ. ಪೊಲೀಸ್ ತಂಡದಲ್ಲಿ ಎಎಸ್‌ಐ ಉಮೇಶನ್, ಪೊಲೀಸರಾದ ಸಂತೋಷ್, ಸುಜಿತ್, ದಿಲೀಶ್ ಕುಮಾರ್, ಕೆ.ಸುರೇಂದ್ರನ್, ಅಭಿಲಾಷ್ ಎಂಬಿವರಿದ್ದರು.

RELATED NEWS

You cannot copy contents of this page