ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಹೊಳೆ ಹೊಯ್ಗೆ ಸಾಗಾಟ: ಓರ್ವ ಸೆರೆ

ಕುಂಬಳೆ: ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಹೊಳೆ ಹೊಯ್ಗೆ ಸಾಗಾಟಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಓರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೀಂಜ ಜೋಡುಕಲ್ಲು ನವೋದಯ ನಗರದ ಗಿರೀಶ್ ಎ (40) ಎಂಬಾತ ಬಂಧಿತ ಆರೋಪಿ. ಕೇರಳ ನದಿ ಸಂರಕ್ಷಣೆ ಕಾನೂನಿಗೆ ವಿರುದ್ಧವಾಗಿ  ಲಾರಿಯಲ್ಲಿ ಹೊಳೆ ಹೊಯ್ಗೆಯನ್ನು ಕದ್ದು ಸಾಗಿಸಿದ ಸೆಕ್ಷನ್ ಪ್ರಕಾರ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಹೇರೂರು ಗ್ರಾಮದ ಚಿನ್ನಮೊಗರು ಎಂಬಲ್ಲಿ ಕುಂಬಳೆ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಆ ದಾರಿಯಾಗಿ ಬರುತ್ತಿದ್ದ ಟಿಪ್ಪರ್ ಲಾರಿಯನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ ಅದರಲ್ಲಿ ಹೊಯ್ಗೆ ಪತ್ತೆಯಾಗಿದೆ. ಪಾಚ್ಚಾನಿ ಹೊಳೆಯಿಂದ ಈ ಹೊಯ್ಗೆಯನ್ನು  ತೆಗೆದು ಇನ್ನೋರ್ವ ವ್ಯಕ್ತಿಯ ಒತ್ತಾಸೆಯಂದಿಗೆ ಇದನ್ನು ಸಾಗಿಸಲಾಗುತ್ತಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಕುಂಬಳೆ ಪೊಲೀಸ್ ಠಾಣೆಯ ಎಸ್‌ಐ ಗಣೇಶನ್ ಕೆ.ಪಿ. ನೇತೃತ್ವದ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ.

RELATED NEWS

You cannot copy contents of this page