ಹಿರಿಯ ಯಕ್ಷಗಾನ ಕಲಾವಿದ ಮಧೂರು ವೆಂಕಟಕೃಷ್ಣ ನಿಧನ

ಮಧೂರು: ಹಿರಿಯ ಯಕ್ಷಗಾನ ಪ್ರಸಂಗಕರ್ತ, ಅರ್ಥದಾರಿ ಹಾಗೂ ನಿವೃತ್ತ ಮಾರಾಟ ತೆರಿಗೆ ಅಧಿಕಾರಿ ಯಾಗಿದ್ದ  ಮಧೂರು  ಂಕಟಕೃಷ್ಣ (87) ನಿಧನಹೊಂದಿದರು.  ವಯೋಸಹಜ ಅಸೌಖ್ಯದಿಂದಿದ್ದ ಇವರು ನಿನ್ನೆ ಸಂಜೆ ಮಧೂರಿನ ಸ್ವ-ಗೃಹದಲ್ಲಿ ಕೊನೆಯುಸಿರೆಳೆದರು.

ಮೃತರು ಪತ್ನಿ ಸುಮಿತ್ರ, ಮಕ್ಕಳಾದ ಜ್ಯೋತಿಲಕ್ಷ್ಮಿ, ಮುರಳೀಮಾಧವ (ಯಕ್ಷಗಾನ ಕಲಾವಿದ), ಡಾ| ನಾರಾಯಣ, ಅಳಿಯ ಡಾ| ನಾಗ ಭೂಷಣ್ (ಬೆಂಗಳೂರು), ಸೊಸೆಯಂ ದಿರಾದ  ಸಂಧ್ಯಾ, ಡಾ| ದೀಪ್ತಿ, ಸಹೋದರಿ ಮೀನಾಕ್ಷಿ ಶಿಬರೂರಾಯ (ಪೆರುದಡಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇತರ ಸಹೋದರಿಯರಾದ ಪಾರ್ವತಿ ಸರಳಾಯ, ಮಹಾಲಕ್ಷ್ಮಿ, ಗಿರಿಜ ಎಂಬಿವರು ಈ ಹಿಂದೆ ನಿಧನರಾಗಿದ್ದಾರೆ. ಸರಕಾರಿ ಸೇವೆಯಿಂದ ನಿವೃತ್ತರಾದ ಬಳಿಕ  ವೆಂಕಟಕೃಷ್ಣ ಅವರು ಯಕ್ಷಗಾನ ರಂಗದಲ್ಲಿ ಸಕ್ರಿಯರಾಗಿದ್ದರು. ಉಳಿಯ ಧನ್ವಂತರಿ ಯಕ್ಷಗಾನ  ಕಲಾ ಸಂಘದ  ಸ್ಥಾಪಕರೂ ಆಗಿದ್ದಾರೆ.   ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಕೂಡ್ಲು ನಾರಾ ಯಣ ಬಲ್ಯಾಯರ ಶಿಷ್ಯನಾಗಿ ಯಕ್ಷಗಾನ ಶಿಕ್ಷಣ ಪಡೆದು ಪ್ರಸಂಗ ಕರ್ತನಾಗಿ ಗುರುತಿಸಿಕೊಂಡಿದ್ದರು. ಮಧೂರು ಕ್ಷೇತ್ರ ಮಹಾತ್ಮೆ, ವೈಶಾಲಿನಿ ಪರಿಣಯ, ಧನ್ವಂತರಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ, ಕುಂಟಾರು ಕ್ಷೇತ್ರ ಮಹಾತ್ಮೆ, ಧರ್ಮಸ್ಥಳ ಕ್ಷೇತ್ರ ಮಹಾತ್ಮೆ, ನಂದಗೋಕುಲದ ಪೊರ್ಲು   ಸಹಿತ ಹಲವು ಯಕ್ಷಗಾನ ಪ್ರಸಂಗ ಗಳನ್ನು ಇವರು ರಚಿಸಿದ್ದಾರೆ. ‘ಚಂದ್ರಕಾಂತಿ’ ಇವರು ರಚಿಸಿದ ಕೊನೆಯ ಯಕ್ಷಗಾನ ಪ್ರಸಂಗವಾ ಗಿದ್ದು, ಕಟೀಲು ಹಾಗೂ ಧರ್ಮಸ್ಥಳ ಮೇಳಗಳು ಈಗಲೂ  ಪ್ರದರ್ಶಿಸುತ್ತಿವೆ. ಪುಳ್ಕೂರು ಬಾಚನ ಬಗ್ಗೆ ಇವರು ರಚಿಸಿದ ಜಗಜಟ್ಟಿ ಬಾಚ ಪ್ರಸಂಗ ಕೂಡ ಜನಪ್ರಿಯವಾ ಗಿದೆ.  ಹಲವಾರು ಭಕ್ತಿಗೀತೆಗಳ ಧ್ವನಿ ಸುರುಳಿಗಳನ್ನೂ ಇವರು ರಚಿಸಿದ್ದಾರೆ. ಶಿವಳ್ಳಿ ಧ್ವನಿ ಪತ್ರಿಕೆಯ ಮಾಜಿ ಸಂಪಾದಕರೂ ಆಗಿದ್ದರು. ಇವರ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಇವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.    ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್‌ನಿಂದಲೂ ಸನ್ಮಾನ ನಡೆದಿದೆ.  ಮಧೂರು ಕ್ಷೇತ್ರ ಬ್ರಹ್ಮಕಲಶ ಸಂದರ್ಭದಲ್ಲಿ ಇವರನ್ನು ಸನ್ಮಾನಿಸಿ ಗೌರವಿಸಲಾಗಿತ್ತು

RELATED NEWS

You cannot copy contents of this page