ಹತ್ಯೆಯತ್ನ ಪ್ರಕರಣದಲ್ಲಿ ಆರೋಪಿಗಳಾದ ಯೂಟ್ಯೂಬರ್ ಖಾದರ್ ಕರಿಪ್ಪೊಡಿ, ತಂಡ ಕರ್ನಾಟಕಕ್ಕೆ ಪಲಾಯನಗೈದಿರುವುದಾಗಿ ಸೂಚನೆ

ಕಾಸರಗೋಡು: ಹತ್ಯೆಯತ್ನ ಪ್ರಕರಣ ದಾಖಲಾಗುವುದರೊಂದಿಗೆ ಯೂಟ್ಯೂಬರ್ ಖಾದರ್ ಕರಿಪ್ಪೊಡಿ ಹಾಗೂ ತಂಡ ಕರ್ನಾಟಕಕ್ಕೆ ಪಲಾಯನಗೈದಿರುವುದಾಗಿ ಸೂಚನೆಯಿದೆ. ಈ ಹಿನ್ನೆಲೆಯಲ್ಲಿ  ಪೊಲೀಸರು ತನಿಖೆಯನ್ನು ಕರ್ನಾಟಕಕ್ಕೆ ವಿಸ್ತರಿಸಿದ್ದಾರೆ.

ಪಳ್ಳಿಕ್ಕೆರೆ ನಿವಾಸಿ ಅಬ್ದುಲ್ ಅಹದ್‌ರನ್ನು ಕೊಲೆಗೈಯ್ಯಲು  ಯತ್ನಿಸಲಾಯಿತೆಂಬುದಾಗಿ  ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಖಾದರನ ಸಹಚರರಾದ  ರಾಶಿದ್ ಹಾಗೂ ಅಶ್ರಫ್ ಎಂಬಿವರು ತಲೆಮರೆಸಿಕೊಂಡಿದ್ದಾರೆ. ಪಳ್ಳಿಕ್ಕರೆಯ ಅಹದ್‌ರ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಖಾದರ್ ಕರಿಪ್ಪೊಡಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.  ಗಲ್ಫ್‌ನಲ್ಲಿ ನಡೆದ ಹಣ ವ್ಯವಹಾರಕ್ಕೆ ಸಂಬಂಧಿಸಿ ಅಬ್ದುಲ್ ಅಹದ್‌ರನ್ನು ಖಾದರ್ ಕರಿಪ್ಪೊಡಿ ಹಾಗೂ ತಂಡ ಇಂಟರ್‌ಲಾಕ್‌ನಿಂದ ಹೊಡೆದು, ಪೆನ್ನಿನಿಂದ ಇರಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ.  ಹಲ್ಲೆಯಿಂದ ಗಂಭೀರ ಗಾಯಗೊಂಡ ಅಹದ್ ಕಾಸರಗೋಡಿನ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಮಧ್ಯೆ ಅಬ್ದುಲ್ ಅಹದ್‌ರನ್ನು ಖಾದರ್ ಹಾಗೂ ತಂಡ ಹಲ್ಲೆಗೈಯ್ಯುವ ಸಿಸಿ ಟಿವಿ ದೃಶ್ಯಗಳು ಬಹಿರಂಗಗೊಂಡಿದೆ. ಪೊಲೀಸರಿಗೆ ಹಲ್ಲೆಗೈದ ಆರೋಪದಂತೆ ವಿದ್ಯಾನಗರ ಹಾಗೂ ಬದಿಯಡ್ಕ ಠಾಣೆಗಳಲ್ಲೂ ಖಾದರ್ ಕರಿಪ್ಪೊಡಿ ವಿರುದ್ಧ ಕೇಸುಗಳಿವೆ. ಪೊಲೀಸರಿಗೆ ಹಲ್ಲೆ,ಕೋಮು ಪ್ರಚೋದನೆ ಸೃಷ್ಟಿ ಸಹಿತ ೭ರಷ್ಟು ಪ್ರಕರಣಗಳು ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಖಾದರ್ ವಿರುದ್ಧ ದಾಖಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page