ಚಂದ್ರಗಿರಿ ರಸ್ತೆಯ ಚಳಿಯಂಗೋಡ್ ಜಂಕ್ಷನ್‌ನಲ್ಲಿ ಗುಡ್ಡೆ ಕುಸಿತ : ವಾಹನ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

ಕಾಸರಗೋಡು: ತೀವ್ರ ಮಳೆ ಹಿನ್ನೆಲೆಯಲ್ಲಿ ಕಾಸರ ಗೋಡು- ಕಾಞಂಗಾಡ್ ಕೆಎಸ್‌ಟಿಪಿ ರಸ್ತೆಯಲ್ಲಿ ಗುಡ್ಡೆ ಕುಸಿದಿದೆ. ಚಂದ್ರಗಿರಿ, ಚಳಿಯಂಗೋಡು, ಕೋಟರು ವತ್‌ನಲ್ಲಿ ಇಂದು ಬೆಳಿಗ್ಗೆ ಅಪಾಯ ಉಂಟಾಗಿದೆ. ಮಣ್ಣು ಕುಸಿಯುವುದನ್ನು ತಡೆಯುವುದಕ್ಕಾಗಿ ನಿರ್ಮಿಸಿದ ಕಾಂಕ್ರೀಟ್ ತಡೆಗೋಡೆಯ ಮೇಲಿನ ಭಾಗದಿಂದ ಮಣ್ಣು ಹಾಗೂ ಬಂಡೆಕಲ್ಲುಗಳು ರಸ್ತೆಗೆ ಬಿದ್ದಿದೆ. ಬೃಹತ್ ಗಾತ್ರದ ಬಂಡೆಕಲ್ಲು  ಆ ದಾರಿಯಾಗಿ ಸಾಗುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ಇದರಿಂದ ಕಾರಿನ ಮುಂಭಾಗ ಹಾನಿಗೊಂಡಿದೆ. ಇದರಿಂದಾಗಿ ಈ ರಸ್ತೆ ಮೂಲಕ ವಾಹನ ಸಂಚಾರ ಅಲ್ಪಹೊತ್ತು ಮೊಟಕುಗೊಂಡಿತ್ತು. ಮಾಹಿತಿ ತಿಳಿದು ಪೊಲೀಸರು ಹಾಗೂ ಅಗ್ನಿಶಾಮಕ ದಳ, ಸ್ಥಳೀಯರು ಸ್ಥಳಕ್ಕೆ ತಲುಪಿ ಜೆಸಿಬಿ ಉಪಯೋಗಿಸಿ ಮಣ್ಣು, ಕಲ್ಲನ್ನು ತೆರವುಗೊಳಿಸಿದ ಬಳಿಕ ಸಂಚಾರ ಪುನರಾರಂಭಿಸಲಾಗಿದೆ. ಕಾರಿನಲ್ಲಿದ್ದವರು ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

RELATED NEWS

You cannot copy contents of this page