ಕಾಸರಗೋಡು: ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ನೀಡುವ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸಂದೇಶಗಳನ್ನು ಪ್ರಚಾರಪಡಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ತಿಳಿಸಿದ್ದಾರೆ. ಔದ್ಯೋಗಿಕ ಸೂಚನೆಗಳು ಪಿಆರ್‌ಡಿ ಪ್ರಕಟಣೆಗಳಾಗಿಯೂ, ಜಿಲ್ಲಾಧಿಕಾರಿಯವರ ಔದ್ಯೋಗಿಕ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಪೇಜ್‌ಗಳಲ್ಲೂ, ಜಿಲ್ಲಾ ಇನ್ ಫರ್ಮೇಶನ್ ಕಚೇರಿಯ ಫೇಸ್‌ಬುಕ್ ಪೇಜ್‌ನಲ್ಲೂ ಪ್ರಕಟಪಡಿಸಲಾ ಗುವುದು. ಅಲ್ಲದೆ ನಕಲಿ ಸುದ್ದಿಗಳನ್ನು ಪ್ರಚಾರಪಡಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.







