ಕುಂಬಳೆ: ಪಂಚಾಯತ್ ಹಾಗೂ ಪೊಲೀಸರು ಕುಂಬಳೆ ಪೇಟೆಯೊಂದಿಗೆ ತೋರುವ ಅವಗಣನೆಯನ್ನು ಪ್ರತಿಭಟಿಸಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕುಂಬಳೆ ಘಟಕ, ಮರ್ಚೆಂಟ್ಸ್ ಯೂತ್ವಿಂಗ್ ತೀವ್ರ ಆಂದೋಲನಕ್ಕೆ ನೇತೃತ್ವ ನೀಡಲಿದೆ ಎಂದು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕುಂಬಳೆ ಘಟಕ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹೋರಾಟದ ಮೊದಲ ಹಂತವಾಗಿ ಈ ತಿಂಗಳ 6ರಂದು ಬೆಳಿಗ್ಗೆ 10 ಗಂಟೆಗೆ ಪಂಚಾಯತ್ ಕಚೇರಿಗೆ ವ್ಯಾಪಾರಿಗಳು ಮಾರ್ಚ್ ನಡೆಸುವರು. ರಾಜ್ಯ ಸಮಿತಿ ಉಪಾಧ್ಯಕ್ಷ ಕೆ. ಅಹಮ್ಮದ್ ಶರೀಫ್ ಉದ್ಘಾಟಿಸುವರು. ರಾಜೇಶ್ ಮನಯತ್ ಅಧ್ಯಕ್ಷತೆ ವಹಿಸುವರು.
ಬದಿಯಡ್ಕ ಭಾಗದಿಂದ ಕುಂಬಳೆಗೆ ತಲುಪುವ ಪ್ರಯಾಣಿಕರನ್ನು ಅರ್ಧ ದಾರಿಯಲ್ಲಿ ಇಳಿಸಿ ಉಪಟಳ ನೀಡುವ ಬಸ್ ಮಾಲಕರ, ನೌಕರರ ಕ್ರಮ ತಪ್ಪೆಂದು ಟ್ರಾಫಿಕ್ ರೆಗ್ಯುಲೇಟರಿ ಕಮಿಟಿ, ಪಂಚಾಯತ್ ತೀರ್ಮಾನ ಕೈಗೊಂಡಿದ್ದರೂ ಇದನ್ನು ಸರಿಪಡಿಸಲು ಸಾಧ್ಯವಾಗಿಲ್ಲವೆಂದು ಮುಖಂಡರು ಆರೋಪಿಸಿದರು. ಪಂಚಾಯತ್ ಕೈಗೊಳ್ಳುವ ತೀರ್ಮಾನಗಳು ಕೇವಲ ಕಾಗದಕ್ಕೆ ಮಾತ್ರವೇ ಸೀಮಿತವಾಗುತ್ತಿದೆ. ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಶನ್, ಟೈಲರ್ಸ್ ಅಸೋ ಸಿಯೇಶನ್, ಗೋಲ್ಡ್ ಆಂಡ್ ಸಿಲ್ವರ್ ಮರ್ಚೆಂಟ್ಸ್ ಅಸೋಸಿಯೇಶನ್, ಬಾರ್ಬರ್ಸ್ ಅಸೋಸಿಯೇಶನ್ ಎಂಬಿವುಗಳ ಜಂಟಿ ಸಹಕಾರದೊಂದಿಗೆ ಹೋರಾಟ ನಡೆಯಲಿದೆ. ಹಳೆಯ ಬಸ್ ನಿಲ್ದಾಣವನ್ನು ಪ್ರಯಾಣಿಕರಿಗಾಗಿ ತೆರೆದುಕೊಡಬೇಕು, ಪುನರ್ ನಿರ್ಮಾಣಕ್ಕೆ ಮುರಿದು ತೆಗೆದ ಕುಂಬಳೆ ಬಸ್ ನಿಲ್ದಾಣವನ್ನು ಶೀಘ್ರ ನಿರ್ಮಿಸಬೇಕು, ವ್ಯಾಪಾರಿಗಳಿಗೆ ಪುನರ್ವಸತಿ ವ್ಯವಸ್ಥೆ ಮಾಡಬೇಕು, ಆಟೋರಿಕ್ಷಾಗಳಿಗೆ ಪಂಚಾಯತ್ ನೋಂದಾವಣೆ ಖಡ್ಡಾಯಗೊಳಿಸಬೇಕು, ಟೇಕ್ ಎ ಬ್ರೇಕ್, ಮೀನು ಮಾರುಕಟ್ಟೆ ಎಂಬಿವುಗಳನ್ನು ತೆರೆದುಕೊಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸಲಾಗುವುದು.
ಮುಷ್ಕರ ಆರಂಭದಿಂದ ಕೊನೆಗೊಳ್ಳುವವರೆಗೆ ಕುಂಬಳೆಯಲ್ಲಿ ಅಂಗಡಿ, ಮಾರುಕಟ್ಟೆಗಳನ್ನು ಮುಚ್ಚಲಾಗುವುದು. ಇದಕ್ಕೂ ಸ್ಪಂದಿಸ ದಿದ್ದರೆ ದ್ವಿತೀಯ ಹಂತದಲ್ಲಿ ಪೊಲೀಸ್ ಸ್ಟೇಷನ್ ಮಾರ್ಚ್ ನಡೆಸಲಾಗುವು ದೆಂದು ವ್ಯಾಪಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕುಂಬಳೆ ಘಟಕದ ಅಧ್ಯಕ್ಷ ರಾಜೇಶ್ ಮನಯತ್, ಪ್ರಧಾನ ಕಾರ್ಯ ದರ್ಶಿ ಸತ್ತಾರ್ ಆರಿಕ್ಕಾಡಿ, ಕೋಶಾಧಿಕಾರಿ ಅನ್ವರ್ ಸಿಟಿ, ಮರ್ಚೆಂಟ್ಸ್ ಯೂತ್ ವಿಂಗ್ ಕುಂಬಳೆ ಘಟಕ ಅಧ್ಯಕ್ಷ ಅಶ್ರಫ್, ಪ್ರಧಾನ ಕಾರ್ಯದರ್ಶಿ ಹೈದರ್, ಕೋಶಾಧಿಕಾರಿ ಸಿದ್ದಿಕ್ ಮುಬಾರಕ್ ಭಾಗವಹಿಸಿದರು.






