ಹೊಸದುರ್ಗ: ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ ಬೆಲೆಬಾಳುವ ದಾಖಲೆಗಳು ಅಡಕವಾದ ಪರ್ಸ್ 8ನೇ ತರಗತಿ ವಿದ್ಯಾರ್ಥಿ ವಾರೀಸು ದಾರನಿಗೆ ಹಸ್ತಾಂತರಿಸಿದನು. ನೀಲೇಶ್ವರ ಪರಿಪ್ಪುವಡ ವಿಭವ ಶಾಲಾ ಬಳಿಯಿಂದ 15ರಷ್ಟು ದಾಖಲೆಪತ್ರಗಳು ಅಡಕವಾಗಿರುವ ಪರ್ಸ್ ಛಾಯೋತ್ತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ಹಾಗೂ ಶಾಲೆಯ ಎನ್‌ಸಿಸಿ ಕೆಡೆಟ್ ಪಾಲಾ ನಿವಾಸಿ ದ್ರುಪದ್‌ನಿಗೆ ಬಿದ್ದು ಸಿಕ್ಕಿತ್ತು. ದಾಖಲೆಪತ್ರಗಳು ಅಡಕವಾಗಿರುವ ಈ ಪರ್ಸ್‌ನ್ನು ದ್ರುಪದ್ ಕೂಡಲೇ ನೀಲೇಶ್ವರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದನು.
ತನಿಖೆಯಲ್ಲಿ ಪರ್ಸ್‌ನ ವಾರೀಸುದಾರ ಪಾಲಕ್ಕಾಡ್ ವಾಣಿಯಾಂಕುಳಂ ನಿವಾಸಿ ಹಾಗೂ ನೀಲೇಶ್ವರ ಕೋಟಪ್ಪುರಂನಲ್ಲಿ ಬಾಡಿಗೆಗೆ ವಾಸಿಸುವ ವ್ಯಾಪಾರಿ ಯಾದ ಕೆ.ಪಿ. ರತೀಶ್ ಕುಮಾರ್ ರದ್ದೆಂದು ತಿಳಿದು ಬಂತು. ಕೂಡಲೇ ಪೊಲೀಸ್ ಠಾಣೆಗೆ ಬರಹೇಳಿ ಸಬ್ ಇನ್ಸ್‌ಪೆಕ್ಟರ್ ಕೆ. ಅಜಿತ, ಜನಮೈತ್ರಿ ಬೀಟ್ ಆಫೀಸರ್ ದಿಲೀಶ್ ಕುಮಾರ್ ಎಂಬಿವರ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು. ದ್ರುಪದ್‌ನ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತವಾಗಿದೆ.






