ಚೆರುಗೋಳಿಯಲ್ಲಿ ವಿದ್ಯುತ್ ತಂತಿ ಮೇಲೆ ಬಿದ್ದ ಮರ:ಹಲವು ವಿದ್ಯುತ್ ಕಂಬ ಹಾನಿ, ತಪ್ಪಿದ ದುರಂತ

ಮಂಗಲ್ಪಾಡಿ: ಚೆರುಗೋಳಿ ಶಾಲಾ ಬಳಿಯಲ್ಲಿರುವ ಬೃಹತ್ ಮರವೊಂದು ವಿದ್ಯುತ್ ತಂತಿ ಮೇಲೆ ಮುರಿದು ಬಿದ್ದ ಪರಿಣಾಮ ಪರಿಸರದ ಸುಮಾರು ಎಂಟು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಈ ವೇಳೆ ರಸ್ತೆಯಲ್ಲಿ ಯಾರು ಇಲ್ಲದಿರು ವುದರಿಂದ ಸಂಭವಿಸಬಹುದಾದ ದೊಡ್ಡ ದುರಂತ ತಪ್ಪಿಹೋಗಿದೆ. ಮರ ಬಿದ್ದ ವೇಳೆ ತಂತಿ ಹಾಗೂ ಕಂಬಗಳು ಮುರಿದು ರಸ್ತೆಯಲ್ಲಿ ಚೆಲ್ಲಾಪಿಲ್ಲಿಗೊಂಡಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಾಹನ ಸಹಿತ ಜನರÀÄ ನಿತ್ಯವೂ ಸಂಚರಿಸುತ್ತಿದ್ದು, ಘಟನೆ ವೇಳೆ ರಸ್ತೆಯಲ್ಲಿ ಯಾರೂ ಇಲ್ಲದಿದ್ದುದರಿಂದ ಅಪಾಯತಪ್ಪಿದೆ. ಕೂಡಲೇ ವಿದ್ಯುತ್ ಇಲಾಖೆ ಸಿಬ್ಬಂದಿಗಳು ತಲುಪಿ ವಿದ್ಯುತ್ ವಿಚ್ಚೇದಿsಸಿದ್ದಾರೆ. ಅಗ್ನಿ ಶಾಮಕದಳ, ಊರವರು ಹಾಗೂ sಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್, ಜನಪ್ರತಿನಿಧಿಗಳ ಸಹಕಾರದಿಂದ ಮರವನ್ನು ಕಡಿದು ತೆರವುಗೊಳಿಸಲಾಯಿತು. ವಿದ್ಯುತ್ ಕಂಬಗಳ ದುರಸ್ತಿಕಾರ್ಯ ನಡೆಯುತ್ತಿದೆ. ಈ ಪ್ರದೇಶದಲ್ಲಿ ವಿದ್ಯುತ್ ಮೊಟಕುಗೊಂಡಿದೆ.

RELATED NEWS

You cannot copy contents of this page