ಕಾಸರಗೋಡು: ಕನ್ನಡ ಗ್ರಾಮದಲ್ಲಿ ಜಿಲ್ಲಾ ಫ್ರೀಲಾನ್ಸ್ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯ ಇದರ ಸಹಕಾರದಲ್ಲಿ ಕನ್ನಡ ಪತ್ರಿಕಾ ದಿನಾಚರಣೆ, ಮಾಧ್ಯಮ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರಗಿತು. ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಜಿಲ್ಲೆಯಲ್ಲಿ ಕನ್ನಡ ಪತ್ರಿಕೋಧ್ಯಮ ನಡೆದು ಬಂದ ದಾರಿ ಮತ್ತು ಇತಿಹಾಸದ ಬಗ್ಗೆ ಮಾತ ನಾಡಿದರು. ಅಂಕಣಕಾರ ಕೆ. ಶ್ಯಾನು ಭೋಗ್ ಕೂಡ್ಲು ಅಧ್ಯಕ್ಷತೆ ವಹಿಸಿದರು. ಛಾಯಾಗ್ರಾಹಕ ಶ್ರೀಕಾಂತ್, ಕವಿ. ರಾಧಾಕೃಷ್ಣ ಉಳಿಯತ್ತಡ್ಕ, ಜಯಾನಂದ ಕುಮಾರ್ ಹೊಸದುರ್ಗ, ವಿಷ್ಣು ಕೆ. ಶ್ಯಾನುಭೋಗ್, ಗಣೇಶ್ ಪಾರೆಕಟ್ಟೆ ಇವರನ್ನು ಅಭಿನಂದಿಸಲಾಯಿತು.
ದ.ಕ. ಜಿಲ್ಲೆ, ಕಾಸರಗೋಡು ಜಿಲ್ಲೆಯಿಂದ ಪ್ರಕಟವಾಗುವ ಕನ್ನಡ ದಿನಪತ್ರಿಕೆಗಳ ಪ್ರದರ್ಶನ ಏರ್ಪಡಿಸಲಾ ಯಿತು. ದಿವಾಕರ ಪಿ. ಅಶೋಕನಗರ ಕನ್ನಡ ಪತ್ರಿಕಾ ಪ್ರತಿಜ್ಞೆ ಬೋಧಿಸಿದರು. ಈ ವೇಳೆ ನಿವೃತ್ತ ಪ್ರೊ. ಎ. ಶ್ರೀನಾಥ್, ಶಿವರಾಮ ಕಾಸರಗೋಡು, ಕೆ.ಎನ್. ವೆಂಕಟ್ರಮಣ ಹೊಳ್ಳ, ಕೆ.ವಿ. ರಮೇಶ ಕಾಸರಗೋಡು, ಕೆ. ವರಪ್ರಸಾದ್ ಕೋಟೆಕಣಿ, ಪುರುಷೋತ್ತಮ ಎಂ. ನಾಯ್ಕ್, ಕೆ. ಜಗದೀಶ್ ಕೂಡ್ಲು, ಕುಶಲಕುಮಾರ ಕೆ, ಅನುಷ ಕೆ, ಕೃಪಾನಿಧಿ ಕೆ. ಭಾಗವಹಿಸಿದರು.







