ಮನೆ ಕುಸಿತ: ವ್ಯಾಪಕ ನಾಶನಷ್ಟ

ಮಂಜೇಶ್ವರ: ಹೆಂಚು ಹಾಸಿದ ಮನೆಯೊಂದು ನಿನ್ನೆ  ರಾತ್ರಿ ಕುಸಿದುಬಿದ್ದಿದ್ದು ಕುಟುಂಬ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದೆ. ಮಂಜೇಶ್ವರ ರೈಲು ನಿಲ್ದಾಣ ಪರಿಸರದ ನಿವಾಸಿಯಾಗಿ ರುವ ವೇದಾವತಿ ಎಂಬವರ ಮನೆ ನಿನ್ನೆ ರಾತ್ರಿ 12 ಗಂಟೆ ವೇಳೆ ಕುಸಿದಿದೆ. ಶಬ್ದ ಕೇಳಿ ಮನೆಯವರು ಹೊರಗೆ ಓಡಿ ಹೋಗಿದ್ದು, ಇದರಿಂದ ಭಾರೀ ದುರಂತ ತಪ್ಪಿಹೋಗಿದೆ. ಹೆಂಚು ಹಾಸಿದ ಮನೆಯ ಛಾವಣಿ ಕುಸಿದು ಬಿದ್ದಿದ್ದು ಇದರಿಂದ ವ್ಯಾಪಕ ನಾಶನಷ್ಟ ಸಂಭವಿಸಿದೆ. ಬಿಜೆಪಿ ನೇತಾರ ಹರಿಶ್ಚಂದ್ರ ಮಂಜೇಶ್ವರ, ಕಲ್ಕಿ ಮಂಜೇಶ್ವರ ಇದರ  ಪದಾಧಿಕಾರಿ ಅರುಣ್ ದುರ್ಗಿಪಳ್ಳ, ವಾರ್ಡ್ ಸದಸ್ಯೆ ಹರಿಣಾಕ್ಷಿ ಮನೆಗೆ ಭೇಟಿ ನೀಡಿದರು.

RELATED NEWS

You cannot copy contents of this page