ಬಾವಿಗೆ ಹಾರಿದ ಯುವತಿ ಮೃತ್ಯು: ರಕ್ಷಿಸಲೆತ್ನಿಸಿದ ತಾಯಿಗೆ ಗಂಭೀರ

ಹೊಸದುರ್ಗ: ಯುವತಿ ಯೋರ್ವೆ ಬಾವಿಗೆ ಹಾರಿ ಮೃತ ಪಟ್ಟಿದ್ದು, ಈಕೆಯನ್ನು ರಕ್ಷಿಸಲು ಹಾರಿದ ತಾಯಿ ಗಂಭೀರ ಗಾಯ ಗೊಂಡಿದ್ದಾರೆ.  ತಳಿಪರಂಬ ಬಳಿಯ ಚವನಪ್ಪುಳ ಎಂಬಲ್ಲಿ ಘಟನೆ ನಡೆದಿದ್ದು, ಕರಿಯ್ಯಾಪತ್ತ್ ಚಿತ್ರಲೇಖ (38) ಮೃತಪಟ್ಟ ಯುವತಿಯಾಗಿ ದ್ದಾರೆ.   ಚಿತ್ರಲೇಖ ಹಾಗೂ ತಾಯಿ ಲಕ್ಷ್ಮಿ ಮಾತ್ರವೇ ಮನೆಯಲ್ಲಿ ವಾಸಿಸುತ್ತಿದ್ದರು.  ಚಿತ್ರಲೇಖರಿಗೆ ಮಾನಸಿಕ  ಅಸ್ವಸ್ಥತೆ ಇದ್ದುದಾಗಿ ಹೇಳಲಾಗುತ್ತಿದೆ. ನಿನ್ನೆ ಬೆಳಿಗ್ಗಿನಿಂದ ತಾಯಿ ಹಾಗೂ ಮಗಳು ನಾಪತ್ತೆಯಾಗಿದ್ದರು. ಸಂಬಂಧಿಕರು  ಹಾಗೂ ನೆರೆಮನೆ ನಿವಾಸಿಗಳು ಇವರಿಗೆ ಫೋನ್ ಮಾಡಿದರೂ ಪ್ರತಿಕ್ರಿಯೆ ಉಂಟಾಗಿಲ್ಲ. ಇದರಿಂದ  ಸಂಜೆ ಸಂಬಂಧಿಕರು ತಲುಪಿ  ಪೊಲೀಸರು ಶೋಧ ನಡೆಸಿದಾಗ  ತಾಯಿ ಹಾಗೂ ಮಗಳು ಬಾವಿಯಲ್ಲಿ ಪತ್ತೆಯಾಗಿದ್ದಾರೆ.  ಈ ವೇಳೆ ಚಿತ್ರಲೇಖ ಮೃತಪಟ್ಟಿದ್ದು, ಲಕ್ಷ್ಮಿ ಬಾವಿಯ ಹಗ್ಗವನ್ನು ಹಿಡಿದು ನಿಂತಿದ್ದರು. ನಾಗರಿಕರು ಹಾಗೂ ಅಗ್ನಿಶಾಮಕದಳ ಸೇರಿ ಲಕ್ಷ್ಮಿಯನ್ನು ಮೇಲೆತ್ತಿ ಅಪಾಯದಿಂದ ಪಾರು ಮಾಡಿದ್ದಾರೆ. ಇವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಾವಿಗೆ ಹಾರಿದ ಮಗಳನ್ನು ರಕ್ಷಿಸಲು ತಾಯಿ ಹಾರಿರುವುದಾಗಿ ತಿಳಿದುಬಂದಿದೆ.

RELATED NEWS

You cannot copy contents of this page