ಕಾಸರಗೋಡು: 25 ಕೋಲು ಆಳ ಹಾಗೂ 8 ಕೋಲು ನೀರಿರುವ ಬಾವಿಗೆ ಬಿದ್ದ ವ್ಯಕ್ತಿಯನ್ನು ಅಗ್ನಿಶಾಮಕದಳ ಹಾಗೂ ನಾಗರಿಕರು ಸೇರಿ ರಕ್ಷಿಸಿದ ಘಟನೆ ನಡೆದಿದೆ.
ಚೆಮ್ನಾಡ್ ಅಣಿಂಞ್ಞದ ರಾಜ್‌ಮೋಹನ್ (65)ರನ್ನು ರಕ್ಷಿಸಲಾಗಿದೆ. ಇವರು ಇಂದು ಬೆಳಿಗ್ಗೆ ಮನೆಯ ಬಾವಿಗೆ ಬಿದ್ದಿದ್ದರು. ವಿಷಯ ತಿಳಿದು ತಲುಪಿದ ನಾಗರಿಕರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಆದರೆ ಅವರನ್ನು ಮೇಲಕ್ಕೆತ್ತಲಾಗಲಿಲ್ಲ. ಇದರಿಂದ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಲಾಯಿತು. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಂ. ಸತೀಶನ್‌ರ ನೇತೃತ್ವದಲ್ಲಿ ಅಗ್ನಿಶಾಮ ಕದಳ ತಲುಪಿ ರಾಜ್‌ಮೋಹನ್‌ರನ್ನು ಮೇಲಕ್ಕೆತ್ತಿದೆ. ಅಗ್ನಿಶಾಮಕದಳದಲ್ಲಿ ಫಯರ್ ಆಂಡ್ ರೆಸ್ಕ್ಯೂ ಆಫೀಸರ್‌ಗಳಾದ ಟಿ.ಅಮಲ್ ರಾಜ್, ಜಿತಿನ್ ಕೃಷ್ಣನ್,ಇ. ಪ್ರಸೀದ್, ಹೋಂಗಾರ್ಡ್‌ಗಳಾದ ಎನ್.ಪಿ. ರಾಜೇಶ್, ವಿ.ವಿ. ಉಣ್ಣಿಕೃಷ್ಣನ್ ಎಂಬಿವರಿದ್ದರು.






