ಯುವತಿಯನ್ನು ದೂಡಿ ಹಾಕಿ ಮೂರು ಪವನ್‌ನ ಕರಿಮಣಿ ಸರ ಅಪಹರಣ: ಸ್ಕೂಟರ್‌ನಲ್ಲಿ ತಲುಪಿದ ಆರೋಪಿಗಳಿಗಾಗಿ ತೀವ್ರ ಶೋಧ

ಕಾಸರಗೋಡು:  ಹಾಡಹಗಲೇ ದ್ವಿಚಕ್ರ ವಾಹನದಲ್ಲಿ ತಲುಪಿದ ತಂಡ ಯುವತಿಯನ್ನು ದೂಡಿಹಾಕಿ ಆಕೆಯ ಕುತ್ತಿಗೆಯಿಂದ ಮೂರು ಪವನ್‌ನ ಕರಿಮಣಿಸರವನ್ನು ಕಸಿದು ಪರಾರಿಯಾದ ಘಟನೆ ನಡೆದಿದೆ. ಮಾವುಂಗಾಲ್ ನೆಲ್ಲಿತ್ತರ ಕ್ಯಾಂಪ್ಕೋ ಸಮೀಪ ನಿನ್ನೆ ಸಂಜೆ ಈ ಘಟನೆ ನಡೆದಿದೆ. ನೆಲ್ಲಿತ್ತರದ ಫುಡ್ ಪ್ರೊಡಕ್ಟ್ಸ್ ಸಂಸ್ಥೆಯ ನೌಕರೆಯೂ ಪುಲಯನಡ್ಕದ ರವಿ ಎಂಬವರ ಪತ್ನಿ  ಕೆ.ಸಿಂಧು(42) ಅವರ ಕುತ್ತಿಗೆಯಿಂದ ಚಿನ್ನದ ಕರಿಮಣಿಸರವನ್ನು ತಂಡ ಎಗರಿಸಿದೆ. ಕೆಲಸ ಮುಗಿಸಿ ಮನೆಗೆ ತಲುಪಿದ ಸಿಂಧು  ಸ್ಕೂಟರ್‌ನಲ್ಲಿ ಸಾಮಗ್ರಿ ಖರೀದಿಸಲೆಂದು ತೆರಳಿ ದ್ದರು. ಮರಳಿ ಮನೆಗೆ ಹೋಗುತ್ತಿದ್ದ ವೇಳೆ ಬಿಳಿ ಬಣ್ಣದ ಹಳೆಯ ಮೋಡೆಲ್ ಸ್ಕೂಟರ್‌ನಲ್ಲಿ ತಲುಪಿದ ಇಬ್ಬರು ಯುವತಿಯನ್ನು ಹಿಂಬಾಲಿ ಸಿದ್ದಾರೆ. ಆರೋಪಿಗಳು ಹೆಲ್ಮೆಟ್ ಧರಿಸಿದ್ದರು. ಮನೆಯ ಸಮೀಪಕ್ಕೆ ತಲುಪುತ್ತಿದ್ದಂತೆ ದುಷ್ಕರ್ಮಿಗಳು ಸಿಂಧು ಅವರ ಸ್ಕೂಟರ್‌ನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ದುಷ್ಕರ್ಮಿಗಳ ಪೈಕಿ ಓರ್ವ ಸ್ಕೂಟರ್‌ನಿಂದ ಇಳಿದು ಸಿಂಧು ಅವರನ್ನು ದೂಡಿ ಹಾಕಿದ್ದಾನೆ.  ಈ ವೇಳೆ ನೆಲಕ್ಕೆ ಬಿದ್ದ ಸಿಂಧು ಅವರ ಕುತ್ತಿಗೆಯಲ್ಲಿದ್ದ ಮೂರು ಪವನ್‌ನ ಚಿನ್ನದ  ಕರಿಮಣಿಸರವನ್ನು ಕಿತ್ತು  ತೆಗೆದಿದ್ದು ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ವಿಷಯ ತಿಳಿದು ಕಾಞಂಗಾಡ್ ಸಿ.ಐ ಕೆ. ದಿನೇಶ್‌ರ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ತಲುಪಿದೆ. ಆರೋಪಿಗಳನ್ನು ಪತ್ತೆಹಚ್ಚಲು ಘಟನೆ ಸ್ಥಳ ಸಮೀಪದ ವಿವಿಧ ಸಂಸ್ಥೆಗಳ ಸಿಸಿ ಟಿವಿ ದೃಶ್ಯಗ ಳನ್ನು ಪೊಲೀಸರು ಸಂಗ್ರಹಿಸಿ ಪರಿಶೀಲಿಸುತ್ತಿದ್ದಾರೆ. ಘಟನೆ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.   ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನಗಳಲ್ಲಿ ತೆರಳುವ ಯುವತಿ ಯರನ್ನು ತಡೆದು ನಿಲ್ಲಿಸಿ ಚಿನ್ನಾಭರಣಗಳನ್ನು ಕಸಿದು ಪರಾರಿಯಾಗುವ ಘಟನೆ  ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ತೀವ್ರಗೊಂಡಿದೆ. ಇತ್ತೀಚೆಗೆ  ಉಪ್ಪಳ ಹಾಗೂ ಪಯ್ಯನ್ನೂರಿನಲ್ಲಿ ಸ್ಕೂಟರ್ ನಲ್ಲಿ ತಲುಪಿದ ತಂಡಗಳು ಯುವತಿಯರ ದೇಹದಿಂದ ಚಿನ್ನಾಭರಣಗಳನ್ನು ಕಸಿದು ಪರಾರಿಯಾಗಿದ್ದರು.

You cannot copy contents of this page