ಕಾಡುತ್ಪನ್ನ ಮಾರಾಟ ಅಂಗಡಿಯಲ್ಲಿ ಕಳವು

ಕಾಸರಗೋಡು: ಕಾಡುತ್ಪನ್ನಗಳ ಮಾರಾಟದಂಗಡಿಗೆ ಕಳ್ಳರು ನುಗ್ಗಿ ಬಾರೀ  ಕಾಡುತ್ಪನ್ನಗಳನ್ನು ಕದ್ದು ಸಾಗಿಸಿದ ಬಗ್ಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಮುಟ್ಟತ್ತೋಡಿ ಗ್ರಾಮದ ಆಲಂಪಾಡಿ ಸಿ.ಎಚ್.ನಗರ ದತ್ತ್ ಮೂಲೆ ಹೌಸ್ ನ ಇಸ್ಮಾಯಿಲ್ ಎಂಬವರ ಅಂಗಡಿಯಲ್ಲಿ ಈ ಕಳವು ನಡೆದಿದೆ. ಆಲಂಪಾಡಿ ಸಿ.ಎಚ್. ನಗರದಲ್ಲಿರುವ ತನ್ನ ಕಾಡುತ್ಪನ್ನ ಮಾರಾಟದಂಗಡಿಗೆ ಜೂನ್ 30ರಿಂದ ಜುಲೈ 1ರ ನಡುವಿನ ಯಾವುದೋ ಸಮಯದಲ್ಲಿ ಕಳ್ಳರು  ಅಂಗಡಿಯ ಬೀಗ ಒಡೆದು ಒಳನುಗ್ಗಿ ಅಲ್ಲಿ ದಾಸ್ತಾನು ಇರಿಸಲಾಗಿದ್ದ 450 ಕಿಲೋ ಅಡಿಕೆ, 10 ಕಿಲೋದಷ್ಟು ಗೇರುಬೀಜ, ಅಂಗಡಿಯಲ್ಲಿ ಉಪ ಯೋಗಿಸುವ 10,000 ರೂ. ಮೌಲ್ಯದ ಡಿಜಿಟಲ್ ತಕ್ಕಡಿ ಸಹಿತ ಒಟ್ಟಾರೆಯಾಗಿ 2,24,650 ರೂ. ಮೌಲ್ಯದ ಸಾಮಗ್ರಿಗಳನ್ನು ಕದ್ದು ಸಾಗಿಸಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಇಸ್ಮಾಯಿಲ್ ತಿಳಿಸಿದ್ದಾರೆ.

RELATED NEWS

You cannot copy contents of this page