ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶಿಲಾಮಯ ಗರ್ಭಗುಡಿಗೆ ಪಾದುಕಾನ್ಯಾಸ

ಕಾಸರಗೋಡು: ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶಿಲಾಮಯ ಗರ್ಭಗುಡಿಗೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪಾದುಕಾನ್ಯಾಸ ನೇರವೇರಿಸಿದರು. ಇದೇ ವೇಳೆ ಜೀರ್ಣೋದ್ಧಾರ ಸಮಿತಿಯ ನೂತನ ಕಾರ್ಯಾಲಯ ಉದ್ಘಾಟಿ ಲಾಯಿತು. ಈ ವೇಳೆ ಕ್ಷೇತ್ರ ತಂತ್ರಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ಮುಕ್ತೇಸರ ಸುಧಾಕರ ಕೋಟೆ ಕುಂ ಜತ್ತಾಯ, ಅರ್ಚಕ ಪದ್ಮನಾಭ ಮನೋ ಳಿತ್ತಾಯ, ಕಾರ್ಯ ನಿರ್ವಾಹಣಾಧಿ ಕಾರಿ ಪಿ. ರಾಜೇಶ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಅನಂತ್ ಕಾಮತ್, ಉಪಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ರವಿಶಂಕರ ಕಾಮತ್, ಕಾರ್ಯದರ್ಶಿ ಜಗದೀಶ್ ಪ್ರಸಾದ್, ಮನೋಹರ ಶೆಟ್ಟಿ, ಸುಧಾಕರ ಭಂಡಾರಿ, ಉದ್ಯಮಿ ರವೀಂದ್ರ ಶೇಟ್ ಮಂಗಳೂರು, ವಿಷ್ಣು ಅರಳಿತ್ತಾಯ, ನ್ಯಾಯವಾದಿ ಮಹಾಬಲ ಶೆಟ್ಟಿ, ಸಮಿತಿ ಪದಾಧಿಕಾರಿಗಳು, ಸದಸ್ಯರು ಮಹಿಳಾ ಸಮಿತಿ ಪದಾಧಿಕಾರಿಗಳು, ಭಕ್ತರು ಭಾಗವಹಿಸಿದರು. ೧೦೮ ತೆಂಗಿನ ಕಾಯಿ  ಗಣಹೋಮ, ಮೃತ್ಯುಂಜಯ ಹೋಮ, ಮುಷ್ಠಿ ಹಣ ಸಮರ್ಪಣೆ, ಅನ್ನ ಸಂತರ್ಪಣೆ ಜರಗಿತು.

RELATED NEWS

You cannot copy contents of this page