ಕಂಚಿಕಟ್ಟೆ ಸೇತುವೆಯ ದುರವಸ್ಥೆ ಪ್ರತಿಭಟಿಸಿ ಎಸ್‌ಡಿಪಿಐಯಿಂದ ಫುಟ್ಭಾಲ್ ಶೂಟೌಟ್

ಕುಂಬಳೆ:  ಕಂಚಿಕಟ್ಟೆ ಸೇತುವೆಯ ಶೋಚನೀಯಾವಸ್ಥೆಯನ್ನು ಪರಿಹರಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮುಂದುವರಿಸುತ್ತಿರುವ ನಿರ್ಲಕ್ಷ್ಯವನ್ನು ಪ್ರತಿಭಟಿಸಿ ಎಸ್‌ಡಿಪಿಐ ಕುಂಬಳೆ ಪಂಚಾಯತ್ ಸಮಿತಿ  ಸೇತುವೆ ಮೇಲೆ ಫುಟ್ಭಾಲ್ ಶೂಟೌಟ್ ಹಮ್ಮಿಕೊಂಡಿತು. ಮಂಜೇಶ್ವರ ಮಂಡಲ ಅಧ್ಯಕ್ಷ ನಾಸರ್ ಬಂಬ್ರಾಣ ಉದ್ಘಾಟಿಸಿದರು.  ಕಂಚಿಕಟ್ಟೆ ಸೇತುವೆಯ ದುರವಸ್ಥೆಯಿಂದ ಪ್ರಯಾಣಿಕರು ಸಂಚರಿಸಲು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ದೂರುಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದ್ದು ಅಲ್ಲದೆ  ಪ್ರತಿಭಟನೆ ನಡೆಸಿದರೂ ಸಂಬಂಧಪಟ್ಟ ಇಲಾಖೆಗಳು ಸೇತುವೆ ನವೀಕರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿರುವುದು ಖಂಡನೀಯ ವೆಂದು ನಾಸರ್ ಬಂಬ್ರಾಣ ತಿಳಿಸಿದ್ದಾರೆ. ಪಂಚಾಯತ್ ಸಮಿತಿ ಅಧ್ಯಕ್ಷ ನೌಶಾದ್ ಕುಂಬಳೆ ಅಧ್ಯಕ್ಷತೆ ವಹಿಸಿದರು. ಅನ್ವರ್ ಆರಿಕ್ಕಾಡಿ ಸ್ವಾಗತಿಸಿ, ಮೊಯ್ದಿನ್ ಕೊಡ್ಯಮ್ಮೆ ವಂದಿಸಿದರು.ಪ್ರತಿಭಟನಾ ಫುಟ್ಭಾಲ್ ಶೂಟೌಟ್‌ನಲ್ಲಿ ಪಕ್ಷದ ಪದಾ ಧಿಕಾರಿಗಳು, ಕಾರ್ಯಕರ್ತರು, ಸ್ಥಳೀಯರು ಪಾಲ್ಗೊಂಡರು

RELATED NEWS

You cannot copy contents of this page