ಉಪ್ಪಳ: ಸರ್ಕಾರಿ ಉದ್ಯೋಗದ ಕನಸು ಹೊತ್ತ ಯುವಜನರಿಗೆ ಮಾರ್ಗ ದರ್ಶನ ನೀಡುವ ಉದ್ದೇಶದಿಂದ ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆ ವೂರು ಇವರ ಆಯೋಜನೆಯಲ್ಲಿ ಪಿ.ಎಸ್.ಸಿ ಉಚಿತ ಮಾಹಿತಿ ಶಿಬಿರ ಉದ್ಘಾಟನೆಗೊಂಡಿತು. ಅವೇಕ್ ಕಾಸರಗೋಡು ಸಂಸ್ಥೆಯ ಸಹಯೋಗದೊಂದಿಗೆ ನಡೆಯುತ್ತಿರುವ ಈ ಉಚಿತ ತರಬೇತಿ ಶಿಬಿರಕ್ಕೆ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಚಾಲನೆ ನೀಡಿದರು. ಶಿಬಿರವು ಪ್ರತಿ ಭಾನುವಾರ ಬೆಳಗ್ಗೆ ೧೦ ರಿಂದ – ಮಧ್ಯಾಹ್ನ ೧ ಗಂಟೆಯವರೆಗೆ ಶ್ರೀ ಸದ್ಗುರು ನಿತ್ಯಾನಂದ ವಿದ್ಯಾಪೀಠದಲ್ಲಿ ಜರುಗುವುದು. ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ ಇಂದಿನ ತಯಾರಿ ನಾಳಿನ ಸರಕಾರಿ ಉದ್ಯೋಗಕ್ಕೆ ಭದ್ರ ಅಡಿಪಾಯ ಮತ್ತು ಈ ಶಿಬಿರವು ಪಿ. ಎಸ್.ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಎಲ್ಲಾ ಆಕಾಂಕ್ಷಿಗಳಿಗೆ ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಜಿತ್ ಪಾಣೂರು ಕಣ್ಣೂರು ಭಾಗವಹಿಸಿದರು. ಅವೇಕ್ ಸಂಸ್ಥೆಯ ಪ್ರಮುಖರಾದ ನ್ಯಾಯವಾದಿ ಶ್ರೀಕಾಂತ್ , ಶ್ರೀಮಠದ ಟ್ರಸ್ಟಿ ವಿಶ್ವನಾಥನ್ ವೆಂಗರೆ ಹಾಗೂ ಮಂಗಲ್ಪಾಡಿ ಸೇವಾ ಭಾರತೀಯ ಅಧ್ಯಕ್ಷ ರಘು ಚೆರುಗೋಳಿ ಉಪಸ್ಥಿತರಿದ್ದರು. ಸರ್ವೇಶ್ ಕೊರಂಬಳ ನಿರೂಪಿಸಿದರು.







