ಪೈವಳಿಕೆ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬಿರುಕುಬಿಟ್ಟಿದ್ದು ಇದರಿಂದ ವಾಹನ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಪೈವಳಿಕೆ ಪಂಚಾಯತ್‌ನ ೭ನೇ ವಾರ್ಡ್ ಬಳ್ಳೂರು- ಮರ್ಕತ್ತಡ್ಕ ಸೇತುವೆಗೆ ಸಂಪರ್ಕಿಸುವಲ್ಲಿ ರಸ್ತೆ ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಸೃಷ್ಟಿಸಿದೆ. 25 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆ ಇದಾಗಿದೆ. ಶಾಲಾ ವಾಹನಗಳ ಸಹಿತ ಹಲವಾರು ವಾಹನಗಳು ದಿನನಿತ್ಯ ಈ ರಸ್ತೆ ಮೂಲಕ ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ರಸ್ತೆ ಇನ್ನಷ್ಟು ಕುಸಿದರೆ ಈ ಮೂಲಕ ಸಂಚಾರಕ್ಕೆ ಕಷ್ಟವಾಗಲಿದೆ. ಆದ್ದರಿಂದ ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ವಾರ್ಡ್ ಸದಸ್ಯ ರಾಮಕೃಷ್ಣ ಬಲ್ಲಾಳ್ ಸಹಿತ ನಾಗರಿಕರು ಪಂಚಾಯತ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.







